ಕಲಬುರಗಿ: ಒಗ್ಗಟ್ಟಿನ ಮಂತ್ರ ಜಪಿಸಿದರೆ 2023 ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಇಂದು ನಡೆದ ವಿಭಾಗ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಶಿಸ್ತು ಕ್ರಮ ತುಂಬ ಅವಶ್ಯಕತೆ ಇದೆ. ನಾನು ಈ ಬಗ್ಗೆ ಹುಬ್ಬಳ್ಳಿಯ ಸಮಾವೇಶದಲ್ಲಿಯೇ ಹೇಳಿದ್ದೇನೆ.
ಒಳ್ಳೆಯ ವಿಚಾರಗಳಿಗೆ ಆದ್ಯತೆ ನೀಡಬೇಕು.
ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡವುದರ ಜತೆಗೆ ಸಿದ್ದಾಂತಕ್ಕೆ ಬದ್ದವಾಗಿರಬೇಕು ಎಂದರು.
ಸಂಘಟನೆಯಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತಿರುವ ಮುಖಂಡರಿಗೆ ಮತ್ತೆ ಉನ್ನತ ಹುದ್ದೆ ನೀಡುವಂತೆಯೂ ಇದೇ ವೇಳೆ ಅಧ್ಯಕ್ಷರಿಗೆ ಸಲಹೆ ನೀಡಿದರು.
ಚುನಾವಣೆಗೆ ಇನ್ನು ಎರಡು ವರೆ ವರ್ಷ ಅವಕಾಶವಿದ್ದು, ಅಷ್ಟರಲ್ಲಿ ಕಾಂಗ್ರೆಸ್ ಸೈನ್ಯಪಡೆ ಕಟ್ಟುವ ಕೆಲಸ ಉತ್ಸುಕತೆಯಿಂದ ಆಗಬೇಕಿದೆ ಅಂದಾಗ ನಾವು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಶಾಸಕರು, ಪಕ್ಷದ ಮುಖಂಡರು ಮುಂತಾದವರು ಇದ್ದರು.