ಗೋಕಾಕ : 139 ನೇ ವರ್ಷದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿದರು.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಅವರು ಮಾತನಾಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಲಾಗುತ್ತಿದೆ, ಭಾರತೀಯ ಕಾಂಗ್ರೇಸ್ ಪಕ್ಷವು ತನ್ನದೆ ಆದಂತಹ ಇತಿಹಾಸವನ್ನು ಹೊಂದಿದೆ ಭಾರತದ ಆಡಳಿತದಲ್ಲಿ ಈ ರಾಷ್ಟ್ರೀಯ ಕಾಂಗ್ರೇಸ್ ಪಕ್ಷವು ಜನರಿಂದ ಜನರಿಗಾಗಿ ಜನರಿಗೋಸ್ಕರ ಅಪಾರ ಸೇವೆಸಲ್ಲಿಸಿದೆ. ಈ ಪಕ್ಷವು ಬಹುಮತದಿಂದ ಆಯ್ಕೆಗೊಂಡು ಜನಸ್ನೇಹಿ ಸರ್ಕಾರವನ್ನು ಕೊಡುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಠ್ಠಲ ಪರಸನ್ನವರ, ಕಲ್ಲಪ್ಪಾ ಗೌಡ ಲಕ್ಕಾರ, ಸುರೇಶ್ ಮುದ್ದಪ್ಪಗೋಳ, ಶಿವು ಕಿಲಾರಿ, ಇಮ್ರಾನ್ ಶಿವಾಪುರ, ರೆಹಮಾನ್ ಮುಕಾಶಿ, ರವಿ ನಾವಿ ಪ್ರವಿಣ ಗುಡ್ಡಾಕಾಯಿ, ಮಂಜುರ ಸಂಶಾರ, ಕಲಿಲ ಪಾಜನಿಗಾರ, ಬಸು ಕೊಳಕಿ, ಮಂಜು ಸನದಿ, ಕಲಗೌಡ ಪಾಟೀಲ, ಮಾರುತಿ ವಿಜಯನಗರ, ಡಾ ವೃಷಬೆಂದ್ರ ಹಿರೇಮಠ, ಡಾ ಶಾಂತ ಪಿ. ಡಾ. ಉದಯ ಅಂಗಡಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.