ಗೋಕಾಕ : ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ಕಛೇರಿಯಲ್ಲಿ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಅವರ ಜಯಂತಿ ಆಚರಣೆ ಮಾಡಿದರು.
ಈ ಸಮಯದಲ್ಲಿ ಮುಖಂಡರಾದ ವಿವೇಕ ಜತ್ತಿ ಅವರು ಮಾತನಾಡಿ ಕನಕದಾಸರ ಸಾಮಾಜಿಕ ಚಿಂತನೆ ಮತ್ತು ಸಮಾನತೆಯ ಸಮಾಜದ ಆಶಯ ಎಲ್ಲ ಜಾತಿ-ಧರ್ಮಗಳಿಗೂ ಆದರ್ಶಪ್ರಾಯವಾಗಿರುವಂತಹದ್ದು. ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ಬಯಸಿದ್ದ ಸಮಾಜವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಾಗಿದೆ ಅಂತ ತಿಳಿಸಿದರು.
ಈ ಸಂದರ್ಭದಲ್ಲಿ ಹಿಲ್ ಗಾರ್ಡನ್ ಸಿಬ್ಬಂದಿಗಳಾದ ವಿ ಆರ್ ಪರಸನ್ನವರ, ವಿನೋದ್ ಡೊಂಗರೆ, ಪಾಂಡು ರಂಗಸುಭೆ, ಸುರೇಶ್ ಮುದ್ದಪ್ಪಗೋಳ, ಮಂಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.