ಗೋಕಾಕ : ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ವಿತರಣೆ ಮಾಡಿದರು.
ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್ಸ್ ಶಿಪ್ ಯಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ ಕ್ರೀಡಾಪಟು ಸವಿತಾ ಅಜ್ಜನಕಟ್ಟಿ ಸಾಧನೆ ಮಾಡಿದ್ದಾರೆ.
ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಗಳಲ್ಲಿ ಮುದೋಳ ತಾಲೂಕಿನ ನಾಗಿನ ಮೇತ್ರಿ ಎಂಬ ಕ್ರೀಡಾಪಟು ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಇಬ್ಬರು ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಕ್ರೀಡೆಗೆ ಭಾಗವಹಿಸಲು ಹೊರಟಿದ್ದು ಅವರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿಲ್ ಗಾರ್ಡನ್ ಸಿಬ್ಬಂದಿಗಳಾದ ವಿಠ್ಠಲ ಪರಸನ್ನವರ, ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯ ಜುಬೇರ್ ಮಿರ್ಜಾಬಾಯಿ ಹಾಗೂ ಅನೇಕರು ಉಪಸ್ಥಿತರಿದ್ದರು
CKNEWSKANNADA / BRASTACHARDARSHAN CK NEWS KANNADA