Breaking News

ಯುವಕರಿಗೆ ರಾಹುಲ್‌ ಜಾರಕಿಹೊಳಿ ಮಾದರಿ: ಗುರು ಸಿದ್ದೇಶ್ವರ ಸ್ವಾಮೀಜಿ


ಉಭಯ ಶ್ರೀಗಳಿಂದ ಆಶೀರ್ವಾದ ಪಡೆದ ರಾಹುಲ್‌ ಜಾರಕಿಹೊಳಿ- 24ನೇ ಜನ್ಮದಿನ ನಿಮಿತ್ತ ಉಚಿತ ಕಣ್ಣಿನ ತಪಾಸಣೆ- ಅಪಾರ ಅಭಿಮಾನಿಗಳು ರಕ್ತದಾನ

ಬೆಳಗಾವಿ: ಯುವಕರಿಗೆ ಮಾದರಿಯಾಗಿ, ನಿರಂತರ ಸಮಾಜ ಸೇವೆ ಸಲ್ಲಿಸುವ ಮೂಲಕ ಹೆಸರುವಾಸಿಯಾದ ಸತೀಶ್‌ ಶುಗರ್ಸ್‌ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹತ್ತರಗಿಯ ಕಾರಿ ಮಠದ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿ ಹರಿಸಿದರು.

ಯಮಕನಮರಡಿ ಮತಕ್ಷೇತ್ರದ ಕಾಕತಿಯ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ರಾಹುಲ್‌ ಜಾರಕಿಹೊಳಿಯವರ 24ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ ಸತೀಶ್‌ ಜಾರಕಿಹೊಳಿ ಅವರ ಮಾರ್ಗದರ್ಶನಲ್ಲಿ ಬೆಳೆಯುತ್ತಿರುವ ರಾಹುಲ್ ಜಾರಕಿಹೊಳಿ ಅವರ ಅಭಿಮಾನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹಾರೈಸಿದರು.

ಕಡೋಲಿಯ ದುರದುಂಡೇಶ್ವರ್ ವಿರಕ್ತ ಮಠದ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ಕಾರ್ಯವನ್ನು ಸಮಾಜ ಮೆಚ್ಚಬೇಕು. ಸಮಾಜ ಮೆಚ್ಚಿ, ಗುರುತಿಸಿದರೆ ಮಾಡಿದ ಕಾರ್ಯಕ್ಕೊಂದು ಅರ್ಥ ಬರುತ್ತದೆ. ಅಂತಹ ಕಾರ್ಯವನ್ನು ರಾಹುಲ್ ಮಾಡುತ್ತಿದ್ದಾರೆ. ಸಮಾಜಮುಖಿ ಕೆಲಸಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿರುವ ರಾಹುಲ್ ಜಾರಕಿಹೊಳಿ ಮುಂದೊಂದು ದಿನ ಹೆಮ್ಮರವಾಗಿ ಬೆಳೆಯಲಿದ್ದಾರೆ ಎಂದರು.

ಹುಣಸಿಕೊಳ್ಳ ಮಠದ ರಾಚೋಟಿ ಸ್ವಾಮೀಜಿ ಮಾತನಾಡಿ, ಎಲ್ಲ ದೃಷ್ಟಿಯಿಂದ ಯಮಕನಮರಡಿ ಮತಕ್ಷೇತ್ರ ಅಭಿವೃದ್ಧಿ ಹೊಂದಿದೆ. ಅದಕ್ಕೆ ಸಚಿವ ಸತೀಶ್ ಜಾರಕಿಹೊಳಿಯವರು ಕಾರಣ. ಅವರ ಸುಪುತ್ರ ರಾಹುಲ್ ಕೂಡ ಕ್ಷೇತ್ರದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಜನತೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಾಯಕರನ್ನು ಪಡೆದ ಕ್ಷೇತ್ರದ ಜನ ಪುಣ್ಯವಂತರು ಎಂದರು.

ಕಾಕತಿಯ ರಾಚಯ್ಯ ಶಿವಮೂರ್ತಿ ಸ್ವಾಮೀಜಿ, ಬೆಳಗಾವಿಯ ಮಹಾಂತೇಶ ನಗರದ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನ ಹಾದಿಯಲ್ಲಿ ಸಾಗುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ನಡೆ ಎಲ್ಲರಿಗೂ ಮಾದರಿ. ಅದೇ ದಾರಿಯಲ್ಲಿ ಸಾಗುತ್ತಿರುವ ರಾಹುಲ್ ಜಾರಕಿಹೊಳಿ ಅವರು ತಂದೆಯಂತೆಯೇ ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗುವ ಮೂಲಕ ಯುವಕರಿಗೆ ಮಾದರಿಯಾಗಲಿ ಎಂದು ಆಶೀರ್ವದಿಸಿದರು.

ಯುವ ನಾಯಕ, ಸತೀಶ್‌ ಶುಗರ್ಸ್‌ ನಿರ್ದೇಶಕ ರಾಹುಲ್ ಜಾರಕಿಹೊಳಿ ಮಾತನಾಡಿ, ಮತಕ್ಷೇತ್ರದ ಜನರು ತಂದೆ ಸತೀಶ್‌ ಜಾರಕಿಹೊಳಿ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ 4ನೇ ಬಾರಿಗೆ 57 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದು ಸಂತಸದ ವಿಚಾರ. ಆದ್ದರಿಂದ ನಿಮ್ಮ ಸಮಸ್ಯೆಗಳಿಗೆ, ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಸಿದ್ದರಿದ್ದೇವೆ ಎಂದು ತಿಳಿಸಿದರು.

ವಿಶ್ವದಲ್ಲಿಯೇ ಮೋಡ ಬಿತ್ತನೆ ಮಾಡುವ ಮೂರು ಕಂಪನಿಗಳಿದ್ದು, ಅದರಲ್ಲಿಯೇ ಒಂದು ಕಂಪನಿಯಿಂದ ತಂದೆ, ಸಚಿವ ಸತೀಶ್‌ ಜಾರಕಿಹೊಳಿಯವರು ಬೆಳಗಾಂ ಶುಗರ್ಸ್‌ ನಿಂದ ಬೆಳಗಾವಿ ಜಿಲ್ಲೆಯಲ್ಲಿ ಸ್ವಂತ ದುಡ್ಡಿನಲ್ಲಿ ಮೋಡ ಬಿತ್ತನೆ ಮಾಡಿಸಿದ್ದಾರೆ. ಈ ಬಾರಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಮೋಡ ಬಿತ್ತನೆಯಿಂದ ಜಿಲ್ಲೆಯ ಆಯಾ ಭಾಗದಲ್ಲಿ ಮಳೆಯೂ ಆಗಿದೆ. ಇದರಿಂದ ರೈತರಿಗೆ ಅನುಕೂಲವಾಯಿತು ಎಂದು ಸ್ಮರಿಸಿದರು.

ತಮ್ಮ ಬಿಡುವಿಲ್ಲದ ಸಮಯದಲ್ಲಿ ನನ್ನ ಜನ್ಮದಿನದ ಕಾರ್ಯಕ್ರಮಕ್ಕೆ ಆಗಮಿಸಿ, ಆರ್ಶೀವರ್ದಿಸಿದ ಉಭಯ ಪೂಜ್ಯರಿಗೆ, ಮುಖಂಡರಿಗೆ ಹಾಗೂ ಸಹಸ್ರ ಅಭಿಮಾಜಿಗಳಿಗೆ ಇದೇ ವೇಳೆ ಅನಂತ ಧನ್ಯವಾದಗಳನ್ನು ತಿಳಿಸಿದರು.

ಭೂತರಾಮನಟ್ಟಿಯ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.ಕಾರ್ಯಕ್ರಮಕ್ಕೂ ಮುನ್ನ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಸಿದ್ದೇಶ್ವರ ದೇವಸ್ಥಾನದ ಸಭಾಂಗಣಕ್ಕೆ ಕರೆ ತರಲಾಯಿತು. ಸಾವಿರಾರು ಅಭಿಮಾನಿಗಳು ರಾಹುಲ್‌ ಜಾರಕಿಹೊಳಿ ಅವರನ್ನು ಸತ್ಕರಿಸಿ, ಶುಭ ಕೋರಿದರು.

ಇದೇ ವೇಳೆ ಯುವ ನಾಯಕ, ಸತೀಶ್‌ ಶುಗರ್ಸ್‌ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಅಪಾರ ಸಂಖ್ಯೆಯ ಅಭಿಮಾನಿಗಳು ರಕ್ತದಾನ ಮಾಡಿದರು. ಉಭಯ ಶ್ರೀಗಳು, ಕಾಕತಿ ಗ್ರಾಪಂ ಅಧ್ಯಕ್ಷೆ ವರ್ಷಾ ಲ. ಮುಚ್ಚಂಡಿಕರ್‌, ಉಪಾಧ್ಯಕ್ಷೆ ರೇಣುಕಾ ಕೋಳಿ ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ, ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಎಸ್ಟಿ ಘಟಕದ ಅಧ್ಯಕ್ಷ ರಾಮಣ್ಣಗುಳ್ಳಿ, ತಾಪಂ ಸದಸ್ಯ ಯಲ್ಲಪ್ಪಾ ಕೊಳೆಕರ್‌, ಕಾಕತಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಾಗರ ಪಿಂಗಟ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್‌, ಸಿದ್ದಿಕಿ ಅಂಕಲಗಿ, ಮಹಾಂತೇಶ ಮಗದುಮ್‌ ಸೇರಿದಂತೆ ಯಮಕನಮರಡಿ ಮತಕ್ಷೇತ್ರದ ಸಾವಿರಾರು ಮುಖಂಡರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ