ಗೋಕಾಕ : ವಿಶ್ವಕರ್ಮ ಅಭಿವೃದ್ಧಿ ನಿಗಮ ಬೆಳಗಾವಿ ಜಿಲ್ಲೆಯ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆಯಾದ ಯಮಕನಮರಡಿ ಮತಕ್ಷೇತ್ರದ ಹೊನಗ ಗ್ರಾಮದ ಬಸವರಾಜ್ ಸುತಾರ್ ಅವರು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ನೂತನವಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಬಸವರಾಜ್ ಸುತಾರ ಅವರು ಹಾಗೂ ಸಮಾಜದ ಮುಖಂಡರು ಸೇರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸತ್ಕರಿಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಅರವಿಂದ್ ಕಾರ್ಚಿ ಹಾಗೂ ಸಮಾಜದ ಮುಖಂಡರಾದ ಮುರಳಿ ಬಡಿಗೇರ ರಾಜು ಸುತಾರ, ಪ್ರಕಾಶ ಬಡಿಗೇರ, ವಿನಾಯಕ ಬಡಿಗೇರ, ಕೃಷ್ಣಾ ಸುತಾರ, ಬಾಬು ಸುತಾರ ,ತುಕಾರಾಮ ಬಡಿಗೇರ , ವಿಜಯ ಸುತಾರ, ಹರೀಶ ಬಡಿಗೇರ, ರೇಖಾ ಸುತಾರ. ವೈಶಾಲಿ ಸುತಾರ ಸರಿತಾ ಕಂಬಾರ ಹಾಗೂ ಬೆಳಗಾವಿ ಜಿಲ್ಲೆಯ, ಯಮಕನಮರಡಿ ಮತಕ್ಷೇತ್ರದ ವಿಶ್ವಕರ್ಮ ಸಮಸ್ತ ಸಮಾಜದ ಮುಖಂಡರು , ಯುವಕರು ಉಪಸ್ಥಿತರಿದ್ದರು
.