ಗೋಕಾಕ : ಸತೀಶ್ ಜಾರಕಿಹೊಳಿಯವರ ಕಚೇರಿ ಹಿಲ್ ಗಾರ್ಡನ್ ನಲ್ಲಿ ಗೋಕಾಕ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ವತಿಯಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಇಮ್ರಾನ್ ತಪಕೀರ ರಾಜ್ಯ ಸಂಚಾಲಕ ಸಮೀವುಲ್ಲಾ ದೇಸಾಯಿ ಹಾಗೂ ಬಸನಗೌಡ ಹೊಳಿಯಾಚೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಂಗ್ರೆಸ್ ಮುಖಂಡರಾದ ಶ್ರೀ ವಿವೇಕ ಜತ್ತಿ ಮಾತನಾಡಿ ಕಾಂಗ್ರೆಸ್ ಮಾಡಿದ ಎಪ್ಪತ್ತು ವರ್ಷಗಳ ಸಾಧನೆಯನ್ನು ಬಿಡಿ ಬಿಡಿಯಾಗಿ ಬಿಡಿಸಿ ಹೇಳಿದರು ಹಾಗೂ ಈ ದೇಶದ ಎಲ್ಲಾ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾಧ್ಯ. ಎಲ್ಲರನ್ನೂ ಒಗ್ಗೂಡಿಸಿ ಹೋಗಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಮುಂಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ವಿನಂತಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ರವಿ ಮೂಡಲಗಿ ಇಮಾಮ ಅಂಡಗಿ ಸಲೀಂ ಇನಾಮದಾರ ಹಾಪೀಜ ದಸ್ತಗೀರ ಮುಲ್ಲಾ ನೇಮಿನಾಥ ಬೊಮ್ಮಣ್ಣವರ ಗುಲ್ಜಾರ್ ದೇಸಾಯಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು ಗೋಕಾಕ ಬ್ಲಾಕ್ ಅದ್ಯಕ್ಷ ಶ್ರೀ ರೆಹಮಾನ್ ಮೊಕಾಶಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
CKNEWSKANNADA / BRASTACHARDARSHAN CK NEWS KANNADA