ಯಮಕನಮರಡಿ: ಯಮಕನಮರಡಿ ಮತಕ್ಷೇತ್ರದ ಗವನಾಳ ಮತ್ತು ಗೋಟುರ ಗ್ರಾಮಗಳಿಗೆ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ, ಮತಯಾಚಿಸಿದರು.
ಈ ವೇಳೆ ಶಾಸಕ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ನನ್ನ ಕ್ಷೇತ್ರ ಸುಸಜ್ಜಿತವಾಗಿಬೇಕೆಂದು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿದೆ ಮತಬಾಂಧವರು ಕಾಂಗ್ರೆಸ್ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಯಮಕನಮರಡಿ ಮತಕ್ಷೇತ್ರದಲ್ಲಿ ವಸತಿ ಯೋಜನೆಯಡಿ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗಿದೆ. ನಿಮ್ಮ ಸಹಕಾರ ಸಿಕ್ಕಿದ್ದರಿಂದ ಯಮಕನಮರಡಿ ಮಾದರಿ ಕ್ಷೇತ್ರವನ್ನಾಗಿ ನಿರ್ಮಿಸಲು ಸಾಧ್ಯವಾಗಿದೆ. ಒಳ್ಳೆಯ ಕೆಲಸ ಮಾಡಿದವರನ್ನು ಆಯ್ಕೆ ಮಾಡಿ. ಮಾಜಿ ಸಿಎಂ ಬಂಗಾರಪ್ಪ ಅವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದೆ ಆಯ್ಕೆಯಾಗುತ್ತಿದ್ದರು. ಅವರ ಶಿಷ್ಯನಾದ ನಾನು ಅವರಂತೆ ಆಯ್ಕೆಯಾಗಬೇಕೆಂದು ಹಠ ಇತ್ತು.
ಶಿಕ್ಷಣಕ್ಕೆ ಮೊದಲ ಆದ್ಯತೆ:
ಹೀಗಾಗಿ ಕಳೆದ ಬಾರಿ ಮತಕ್ಷೇತ್ರದಲ್ಲಿ ಪ್ರಚಾರ ಮಾಡದೇ ಆಯ್ಕೆಯಾದೆ. ನನ್ನನ್ನು ಆಯ್ಕೆ ಮಾಡಿದ ನಿಮ್ಮೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ಅಭಿವೃದ್ಧಿಗೆ ಹೆಚ್ಚು ಓತ್ತು ನೀಡುವ ನನ್ನನ್ನು ಮುಂದೆಯೂ ಬೆಂಬಲಿಸುತ್ತೀರಿ ಎಂಬ ನಂಬಿಕೆ ನನಗೆದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಮೊದಲ ಆದ್ಯತೆ ಶಿಕ್ಷಣಕ್ಕೆ, ಹೀಗಾಗಿ ಕಳೆದ 30 ವರ್ಷದ ಹಿಂದೆಯೇ ಎನ್‌ಎಸ್‌ಎಫ್ ಸ್ಕೂಲ್ ಪ್ರಾರಂಭಿಸಿ, 3 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದೇನೆ. ನಂತರ ಶಾಸಕನಾದ ಮೇಲು ಶೈಕ್ಷಣಿಕ ಕಾಂತ್ರಿಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ.
224 ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ನಾನು ನೀಡಿದ ಆದ್ಯತೆ ಯಾವ ಶಾಸಕರು ನೀಡಿಲ್ಲ. ಇದಕ್ಕೆ ಉದಾಹರಣೆ ಯಮಕನಮರಡಿ ಕ್ಷೇತ್ರದ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಿಗೆ 5 ಸಾವಿರ ಡೆಸ್ಕ್ ಗಳನ್ನು ವಿತರಿಸಿದ್ದೇನೆ ಎಂದ ಅವರು, ನಿಮ್ಮ ಸೇವೆ ಮಾಡಲು ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. ಬಹುಮತ ಕಾಂಗ್ರೆಸ್ ಗೆಲುವಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನೂತನ ಕಾರ್ಯಕರ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಕ್ಷೇತ್ರದ ಜನರು ಸನ್ಮಾನಿಸಿದರು.