Breaking News

ಕಾಂಗ್ರೆಸ್‌ ಭದ್ರಗೊಳಿಸಲು ಮತದಾರರು ಕೈ ಜೋಡಿಸಿ: ಶಾಸಕ ಸತೀಶ ಜಾರಕಿಹೊಳಿ


ಯಮಕನಮರಡಿ ಮತಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಭರ್ಜರಿ ಮತಬೇಟೆ

ಯಮಕನಮರಡಿ:  ಯಮಕನಮರಡಿ  ಮತಕ್ಷೇತ್ರದ  ಗೊಟುರ ,  ಹೆಬ್ಬಾಳ ಮತ್ತು ಬೋಡಾಕ್ಯಾನಟ್ಟಿ ಗ್ರಾಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರು ಅಬ್ಬರದ ಪ್ರಚಾರ ನಡೆಸಿದರು.

ಈ ವೇಳೆ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಜನರು ಬದಲಾವಣೆ ಬಯಸಿದ್ದು,  ಮೇ 10 ಕ್ಕೆ ನಡೆಯಲಿರುವ ವಿಧಾನಸಭಾ  ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಬೇಕಾಗಿದೆ. ಹೀಗಾಗಿ ಮತಭಾಂದವರು ವಿಶ್ವಾಸದಿಂದ ತಮ್ಮ ಹಕ್ಕನ್ನು ಚಲಾಯಿಸಿ ಕಾಂಗ್ರೆಸ್‌ ಗೆಲುವಿಗೆ ಸಹಕರಿಸಬೇಕು ಎಂದರು.

 ಬೆಳಗಾವಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಇದನ್ನು ನಾವು ಇನ್ನಷ್ಟು ಭದ್ರಗೊಳಿಸೋಣ” ಎಂದು ಕಾರ್ಯಕರ್ತರಿಗೆ  ಕರೆ ನೀಡಿದರು.  ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ  ನಿಮ್ಮ ಮೇಲಿದೆ. ಈಗಾಗಲೇ ಯಮಕನಮರಡಿ ಕ್ಷೇತ್ರದಲ್ಲಿ ಸುಸುಜ್ಜಿತ ರಸ್ತೆ, ಶುದ್ಧ ಕುಡಿಯುವ ನೀರು, ಬಡವರಿಗೆ ಸೂರು , ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ.

 ರಾಜ್ಯದಲ್ಲಿ ಯಮಕನಮರಡಿ  ಮತಕ್ಷೇತ್ರ ಮಾದರಿ ಕ್ಷೇತ್ರವಾಗಿದೆ.  ಕ್ಷೇತ್ರವನ್ನು ಬಹಳಷ್ಟು ಬೆಳೆಸಬೇಕಾಗಿದೆ. ಆದ್ದರಿಂದ ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. ನಿಮ್ಮ ಕಷ್ಟ ಗಳಿಗೆ ಧ್ವನಿಯಾಗುವ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರ  ನಿಮ್ಮ ಮೇಲಿದೆ  ಎಂದರು.

ಜನರ ನೆಮ್ಮದಿ ಕಸಿದುಕೊಂಡ ಬಿಜೆಪಿ: ಸಮಾಜದಲ್ಲಿ ಎಲ್ಲ ಸಮುದಾಯದ ಇದ್ದಾರೆ. ಅವರು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ ಕೈಗೆಟಕುವ ದರದಲ್ಲಿ ದಿನಸಿ ಸಾಮಗ್ರಿಗಳು ಸಿಗಬೇಕಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲವೂ ಗಗಣಕ್ಕೇರಿವೆ. ಬಿಜೆಪಿ ಸರ್ಕಾರ ದುಡಿದು ತಿನ್ನುವವರ ಅನ್ನ ಕಸೆದುಕೊಳ್ಳುತ್ತಿದೆ.  ರಾಜ್ಯ ಹಾಗೂ ಕ್ಷೇತ್ರದ ಜನರಿಗೆ ನೆಮ್ಮದಿ ಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್‌ ನಾಲ್ಕೈದು ಯೋಜನೆಗಳನ್ನು ಜಾರಿಗೆ ತರಲಿದೆ ಅದಕ್ಕಾಗಿ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಗಳನ್ನು ವಿತ್ತರಿಸಲಾಗುತ್ತಿದೆ. ಕಾಂಗ್ರೆಸ್‌ ಗೆಲುವಿಗೆ ನೀವು ಬಲ ತುಂಬಬೇಕು ಎಂದು ಮನವಿ ಮಾಡಿಕೊಂಡರು.

ಮೇ 10 ಕ್ಕೆ ವಿಧಾನಸಭಾ  ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ , ಯಮಕನಮರಡಿಯಲ್ಲಿ ಮತಕ್ಷೇತ್ರದ  ಶಾಸಕರಾದ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲಿ ಭರ್ಜರಿ ಮತಬೇಟೆ ನಡೆಸಿದರು. ಇಂದು  ಬಿಸಿಲಿನ ಮಧ್ಯೆ  ಕಾಂಗ್ರೆಸ್ ಅಭ್ಯರ್ಥಿಯಾದ ಸತೀಶ್ ಜಾರಕಿಹೊಳಿ ಪರವಾಗಿ ಕಾರ್ಯಕರ್ತರು ಪ್ರಚಾರಕ್ಕೆ ಕೈ ಜೋಡಿಸಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ