ಯಮಕನಮರಡಿ: ಮತಕ್ಷೇತ್ರದಲ್ಲಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕ್ಷೇತ್ರದ ಕೋಚರಿ ಗ್ರಾಮದ ಬಿಜೆಪಿ ಮುಖಂಡರು ಸತೀಶ್ ಜಾರಕಿಹೊಳಿ ಕಾರ್ಯ, ಅಭಿವೃದ್ಧಿ ಮೆಚ್ಚಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈರಪ್ಪಾ ಮಗದ್ದುಮ, ಮಹೇಶ್ ಹಿಪ್ಪರಗಿ, ಪ್ರಶಾಂತ್ ಲೋಳಸೂರ, ರಾಕೇಶ್ ನಾಯಿಕ, ಶ್ರೀಧರ್ ಪುಟ್ಟಿ, ವಿನಾಯಕ ನಾಯಿಕ, ಕೆಂಪಣ್ಣಾ ನಾಯಿಕ, ಪರಸುರಾಮ ಮಾದರ, ಸಾಗರ ಡೊಳ್ಳಿ, ಮಹೇಶ್ ನಾಯಿಕ ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಪಾಂಡುರಂಗ ಮನ್ನಿಕೇರಿ, ಬಬ್ಲು ಮುಳ್ತಾನಿ, ಮಹಾಂತೇಶ ಮತಿವಾಡ, ಜಮೀರ್ ಮುಲ್ಲಾ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು