ಗೋಕಾಕ : ಕೌಜಲಗಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು.
ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಕೌಜಲಗಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುಳಾ ಜೊತೇನವರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಾ. ರಾಜೇಂದ್ರ ಸಣ್ಣಕ್ಕಿ, ಶಿವು ಪಾಟೀಲ್, ಲಕ್ಷ್ಮಣ್ ಮುಸುಗುಪ್ಪಿ, ಅವಣ್ಣ ಮೋಡಿ, ಸಿದ್ದಪ್ಪ ಹಳ್ಳೂರ್, ರಾಯಪ್ಪ ಬಾಳೋಲ್ದಾರ, ಬಸವರಾಜ್ ಜೋಗಿ , ಶಿವರಾಯಿ ಹಳ್ಳೂರ್ ಹಾಗೂ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಪಾಂಡು ಮಣ್ಣಿಕೇರಿ ಉಪಸ್ಥಿತರಿದ್ದರು.