ಬೆಳಗಾವಿ: “ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸತೀಶ ಜಾರಕಿಹೊಳಿ ಫೌಂಡೇಶನದಿಂದ ಸಾಕಷ್ಟು ಸೌಲಭ್ಯಗಳು ನೀಡಲಾಗುತ್ತಿದೆ. ಇವುಗಳ ಸದುಪಯೋಗ ಪಡೆದುಕೊಂಡು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ತಿಳಿ ಹೇಳಿದರು.
ತಾಲೂಕಿನ ಜಾಪರವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಹುಲ್ ಜಾರಕಿಹೊಳಿ ನೇತೃತ್ವದಲ್ಲಿ ಆಯೋಜಿಸಲಾದ ಬಸವಣ್ಣ ಸ್ಪೋರ್ಟ್ಸ್, ಸತೀಶ ಜಾರಕಿಹೊಳಿ ಪುರಸ್ಕೃತ ಬಾಲ್ಯ ಮುಕ್ತ ಖೋಖೋ ಪಂದ್ಯಾವಳಿ ಚಾಲನೆ ನೀಡಿ ಅವರು ಮಾತನಾಡಿದರು,
ಕ್ಷೇತ್ರದಲ್ಲಿ ಜನರಿಗೆ ಲಭ್ಯವಾಗಬೇಕಾದ ರಸ್ತೆ, ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಸರ್ಕಾರ ಶಾಲೆ ಇಂತಹ ಅನೇಕ ಕಾರ್ಯ ಮಾಡುವ ಮೂಲಕ, ಗ್ರಾಮ ವಿಕಾಸ ಮಾಡುವ ಕೆಲಸವನ್ನ ನಮ್ಮ ತಂದೆಯವರು ಮಾಡಿದ್ದಾರೆ. ಅದೇ ರೀತಿ ಸತೀಶ ಜಾರಕಿಹೊಳಿ ಫೌಂಡೇಶದಿಂದ ಯುವಕರಿಗೆ ಹಾಗೂ ಕ್ರೀಡಾ ಆಸ್ತಕರಿಗೆ ಹೆಚ್ಚಿನ ಪ್ರೋತ್ಸಾಹ ಮಾಡುತ್ತಿದ್ದೆವೆ ಎಂದ ಅವರು, ಈಗಾಗಾಲೇ ಕ್ರಿಕೆಟ್ , ಕಬ್ಬಡಿ ಪಂದ್ಯಾವಳಿಗಳು ನಡೆಸಲಾಗಿದೆ. ಮುಖ್ಯವಾದ ಗ್ರಾಮೀಣ ಕೀಡೆಯಾದ ಖೋಖೋ ಪಂದ್ಯಾವಳಿಗಳಿಗೆ ಪ್ರತಿಯೋಬ್ಬರು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.
ಎಲ್ಲಾ ಸಮುದಾಯದ ಜನರನ್ನು ಒಂದೇ ವೇದಿಕೆ ಕರೆದುಕೊಂಡು ಹೋಗುವ ಮಹತ್ವದ ಕಾರ್ಯವನ್ನ ತಂದೆಯವರು ಮಾಡುತ್ತಿದ್ದಾರೆ. ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರ ಸಿದ್ಧಾಂತಗಳನ್ನುಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ತಿಳಿ ಹೇಳಿದರು.
ಡಾ. ಎಂ ಎಸ್ . ಪಾಟೀಲ ಅವರು ಮಾತನಾಡಿ, ಗುಣಮಟ್ಟದ ಶಿಕ್ಷಣ, ಕ್ರೀಡೆ ಮತದಾರರ ಶ್ರೇಯಸ್ಸು ಬಯಸುತ್ತಿರುವ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರ ಕಾರ್ಯವೈಖರಿ ಕಂಡು ರಾಜ್ಯದ ಜನತೆ ಮನಸೋತಿದ್ದಾರೆ. ಸತೀಶ ಜಾರಕಿಹೊಳಿ ಅವರು ಜಾತಿ ಮೀರಿ ಯಮಕನಮರಡಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಅವರಿಂದ ಕ್ಷೇತ್ರದ ಜನರು ಶುದ್ಧ ನೀರನ್ನು ಸೇವಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗಲಿದ್ದು, ನಮ್ಮೆಲ್ಲರ ಬಲವೇ ಶಾಸಕರಿಗೆ ಶಕ್ತಿ ತುಂಬುವ ಕಾರ್ಯವಾಗಬೇಕು ಎಂದರು.
ಸಮಸ್ಯೆ ಹೊಗಲಾಡಿದ ಹೃದಯವಂತ: ಮುರಿದ ಗೇಟ್, ಕುಸಿದಿರುವ ಶಾಲೆ ಕಾಂಪೌಂಡ್, ಕಂಪ್ಯೂಟರ್ ಶಿಕ್ಷಕರ ಕೊರತೆ, ಗ್ರಂಥಾಲಯ, ಶೌಚಾಲಯ ಸಮಸ್ಯೆ… ಹೀಗೆ ಇಲ್ಲಿ ಅನೇಕ ಸಮಸ್ಯೆಗಳಿಗೆ ಮುಕ್ತಿ ಕೊಡಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಪರಿಶ್ರಮದಿಂದ ಶಾಲೆಗಳು ಸುಸುಜ್ಜಿತಗೊಳಿಸಿ ಕೊರತೆ ನಿಗಿಸಿದ ಹೃದಯವಂತ ಶಾಸಕರನ್ನು ಕೊಂಡಾಡಿದರು.
ಕ್ಷೇತ್ರದ ಪ್ರಗತಿ ಬಯಸಿ ಹೃದಯವಂತ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ನಿಮ್ಮ ಆಶೀರ್ವಾದ ನಿರಂತರವಾಗಿ ಇರಬೇಕು ಎಂದರು.
ಯಮಕನಮರಡಿ ಮತಕ್ಷೇತ್ರದ ಗ್ರಾಮಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗಳ ನಿರ್ಮಾಣ ಸೇರಿದಂತೆ ಮರಾಠಾ ಸಮುದಾಯದ ಅಭಿವೃದ್ಧಿಗೆ ಶಾಸಕರು ಹಗಲಿರುಳು ಶ್ರಮಿಸಿದ ಅವರು, ಕ್ಷೇತ್ರದ ಪ್ರಗತಿಗಾಗಿ ಕೋಟ್ಯಾಂತರ ನೀಡಿರುವುದು ಹೆಮ್ಮೆಯ ವಿಷಯ ಎಂದರು.
ರಾಹುಲ್ ಹೆಸರಲ್ಲಿ ಜೈ ಘೋಷ ಮೊಳಗಿಸಿದ ಕ್ರೀಡಾಪ್ರೇಮಿಗಳು: ರಾಹುಲ್ ಜಾರಕಿಹೊಳಿ ನೇತೃತ್ವದಲ್ಲಿ ಆಯೋಜಿಸಲಾದ ಖೋಖೋ ಪಂದ್ಯಾವಳಿಗಳನ್ನು ನೋಡಿ ಕಣ್ಮುಂಬಿಕೊಳ್ಳಲು ಸಾವಿರಾರು ಕ್ರೀಡಾಪ್ರೇಮಿಗಳ ಆಗಮಿಸಿದರು. ಖೋಖೋ ಪಂದ್ಯಾವಳಿ ಆರಂಭ ಆಗುತ್ತಿದ್ದಂತೆ ಮೈದಾನದಲ್ಲಿ ಶಾಸಕ ಸತೀಶಣ್ಣಾ ಜಾರಕಿಹೊಳಿ ಮತ್ತು ಪುತ್ರ ರಾಹುಲ್ ಜಾರಕಿಹೊಳಿ ಹೆಸರಲ್ಲಿನಲ್ಲಿ ಜೈ ಘೋಷ ಮೊಳಗಿಸಿದರು.
ಈ ಸಂದರ್ಭದಲ್ಲಿ ಶಾಸಕ ಆಪ್ತ ಸಹಾಯಕ ಮಲಗೌಡ ಪಾಟೀಲ ,ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಕಂಟಾಬಳೆ , ಕಾಂಗ್ರೆಸ್ ಮುಖಂಡ ಸಿದ್ದಕಿ ಅಂಕಲಗಿ, ಅಧ್ಯಕ್ಷ ರೇಖಾ ಸುತಾರ್, ರೇಖಾ ನರೋಟ್ಟಿ, ರಾಜು ಮಾಯಣ್ಷ, ಗೌಡಪ್ಪಾ ಪಾಟೀಲ, ದತ್ತಾ ಸುತ್ತಾರ್ , ಪ್ರಭು ಕುಂಬರಗಿ, ಸಂಜು ಕಾಂಬಳೆ, ಸುನೀಲ ಪಾವನೋಜಿ, ಪ್ರೇಮಾ ನರೋಟ್ಟಿ, ಲಕ್ಷ್ಮಿ ಕುಟ್ಟರೆ, ಶೋಬಾ ಪಾಟೀಲ್, ಗಜಾನನ ಕಾಗನೇಕರ್ , ಪುಂಡಲೀಕ ಬಾತಕಂಡೆ , ಪ್ರಕಾಶ ರಾಠೋಡ, ಬಸವಂತ ಡೊಂಗರೆ ಹಾಗೂ ಇತರರು ಇದ್ದರು.