ಬೆಳಗಾವಿ: ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿ ತಡೆಗೆ ಬಿಜೆಪಿ ಮತ್ತೆ ಕೊರೊನಾ ಹೆಸರು ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಕಾರ್ಯಕ್ರಮಗಳು ಯಶಸ್ವಿಗಾಗಿ ನಡೆಯುತ್ತಿವೆ. ಇದರಲ್ಲಿ ಮುಖ್ಯವಾಗಿ ಭಾರತ ಜೋಡೋ ಯಾತ್ರೆ. ಈ ಯಾತ್ರೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದನ್ನ ಸಹಿಸದ ಬಿಜೆಪಿ ಕಾಂಗ್ರೆಸ್ ಕಾರ್ಯಕ್ರಮಗಳನ್ನು ತಡೆಗೆ ಮತ್ತೆ ಕೊರೊನಾ ಹೆಸರು ಬಳಕೆ ಮಾಡುತ್ತಿದೆ. ದೇಶದಲ್ಲಿ ೨೦೧೯ರಿಂದ ಕೊರೊನಾ ಇದ್ದು, ಮೊದಲನೇ ಹಾಗೂ ಎರಡನೇ ವರ್ಷದಲ್ಲಿ ಬಹಳ ವೇಗವಾಗಿ ಹರಡಿತ್ತು. ಕಳೆದ ನಾಲ್ಕು ವರ್ಷಗಳ ನಂತರ ಕೊರೊನಾ ಅಂತಹ ಅಪಯಾಕಾರಿ ಏನು ಕಾಣಿಸುತ್ತಿಲ್ಲ. ಅದಕ್ಕೆ ಬಿಜೆಪಿ ಮಾತ್ರ ಮುಂಜಾಗೃತೆ ಕೈಗೊಳ್ಳಬೇಕೆಂದು ಮೋದಿ ಈಗಾಗಲೇ ಮಾಸ್ಕ್ ಹಾಕಿಕೊಳ್ಳಲು ಮುಂದಾಗಿದ್ದಾರೆ. ಇವರ ಈ ನಡೆಗೆ ದೇಶದ ಜನ ಹೆದರಿ ಮತ್ತೆ ಮಾಸ್ಕ್ ಹಾಕಿಕೊಳ್ಳಲು ಯೋಚಿಸುತ್ತಿದ್ದಾರೆ. ಈಗ ನಾವು ದೇಶದ ಆರ್ಥಿಕ ಪ್ರಗತಿಯತ್ತ ಹೆಚ್ಚು ಗಮನ ಕೊಡಬೇಕಿದೆ. ಆದರೆ ಬಿಜೆಪಿ ಮತ್ತೆ ಕೊರೊನಾ ನೆಪವೊಡ್ಡಿ ಹಿಡನ್ ಅಜೆಂಡಾ ಪ್ರಾರಂಭ ಮಾಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಸದ್ಯ ಕರ್ನಾಟಕದಲ್ಲಿ ಚುನಾವಣೆ ಬರುತ್ತಿದೆ. ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಜನ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನ ಸಹಿಸದ ಬಿಜೆಪಿ ಕೊರೊನಾ ತಂತ್ರ ಹೂಡಲು ಮುಂದಾಗಿದೆ. ಈಗ ಬಿಜೆಪಿ ಕಾರ್ಯಕ್ರಮಗಳು ಕಳಚಿ ಬೀಳುತ್ತಿದ್ದು, ಬಿಜೆಪಿ ಕಾರ್ಯಕ್ರಮಗಳಲ್ಲಿ ಜನರೇ ಇಲ್ಲದೇ ಖಾಲಿ ಕುರ್ಚಿಗಳು ಇರುವುದು ಮಾಧ್ಯಮಗಳಲ್ಲಿಯೇ ತೋರಿಸಿಲಾಗಿದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕ್ರಮಗಳ ಯಶಸ್ವಿ ತಡೆಗೆ ಬಿಜೆಪಿ ಮುಂದಾಗಿದೆ. ಬಿಜೆಪಿ ಸಮಯ ಸಂದರ್ಭ ತಕ್ಕ ಹಾಗೇ ಅನುಕೂಲ ಮಾಡಿಕೊಳ್ಳಲಿಕ್ಕೆ ಮುಂದಾಗುತ್ತಿದೆ ಎಂದು ಆರೋಪಿಸಿದರು.
ಮಾಯವಾದ ಮೋದಿ ಹವಾ: ಇತ್ತೀಚಿಗೆ ನಡೆದ ಮೋದಿ ಏರ್ಪೊಟ್ ಕಾರ್ಯಕ್ರಮಕ್ಕೆ ಜನರಿಗೆ ದುಡ್ಡು ಕೊಟ್ಟು ಕರೆಸಲಾಗಿತ್ತು. ಆದರೂ ಸಹ ಕಾರ್ಯಕ್ರಮಕ್ಕೆ ಜನರಿಲ್ಲದೇ ಕುರ್ಚಿಗಳೆಲ್ಲವೂ ಖಾಲಿಯಾಗಿರುವುದು ಕಂಡು ಬಂದಿತ್ತು. ಸದ್ಯ ಕಾಂಗ್ರೆಸ್ ಕಾರ್ಯಕ್ರಮಗಳು ಸಂಪೂರ್ಣ ಯಶಸ್ವಿಯಾಗಿದ್ದು, ಕಾಂಗ್ರೆಸ್ ಉತ್ತಮ ಕಾರ್ಯಕ್ರಮಗಳಿಂದ ದೇಶದಲ್ಲಿರುವ ಮೋದಿ ಹವಾ ಮಾಯವಾಗುತ್ತಿದೆ ಎಂದು ಆರೋಪಿಸಿದರು.