ಗೋಕಾಕ : ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಗೋಕಾಕ ಮತ ಕ್ಷೇತ್ರದ ಹಲವು ಸಮುದಾಯ ಭವನಗಳಿಗೆ , ಮಂದಿರಗಳಿಗೆ , ಚರ್ಚ, ಮಸಿದಿಗಳಿಗೆ ಕುರ್ಚಿ, ಸೌಂಡ್ ಸಿಸ್ಟಮ್ ವಿತರಿಸಿದರು.

ಇಲ್ಲಿನ ಹಿಲ್ ಗಾಡರ್ನ್ ಕಚೇರಿಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಗೋಕಾಕ ನಗರದ ಗೌಳಿ ಗಲ್ಲಿ ವಿಠ್ಠಲ ಮಂದಿರ, ಕುರುಬರ ದಡ್ಡಿ ಶ್ರೀ ರಾಘವೇಂದ್ರ ಮಠ, ಶಿಂಗಲಾಪುರ ನವಜೀವನ ಚರ್ಚ, ಉಪ್ಪಾರಟ್ಟಿ ಗ್ರಾಮದ ಶ್ರೀ ವಿಠ್ಠಲ ದೇವಸ್ಥಾನ, ಗೋಕಾಕ ಹರಲಯ್ಯ ದೇವಸ್ಥಾನ, ಭಜಂತ್ರಿ ಸಮಾಜ, ಹಾಗೂ ಹುಲಿಕಟ್ಟಿ ಗ್ರಾಮಕ್ಕೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಕುರ್ಚಿ ಹಾಗೂ ಸೌಂಡ್ ಸಿಸ್ಟಮ್ ವಿತರಿಸಿದರು.

ಈ ಸಮಯದಲ್ಲಿ ಮಾತನಾಡಿದ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ ಸಭೆ -ಸಮಾರಂಭ ಅನುಕೂಲಕ್ಕಾಗಿ ಸಮುದಾಯಗಳಿಗೆ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಸಮಾಜ ಸೇವೆಗಾಗಿ ಸತೀಶ ಜಾರಕಿಹೊಳಿ ಫೌಂಡೇಶನ್ ನಿರಂತರ ಸಹಕಾರ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವಿವೇಕ್ ಜತ್ತಿ, ನಾಮದೇವ ರೇಣಕೆ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕಲ್ಪನಾ ಜೋಶಿ, ಸುರೇಶ ಮುದ್ದಪ್ಪಗೋಳ, ಪಿ ಕೆ ನಾಡಿಗೇರ , ಶಶಿಕಾಂತ ಹೊಸಮನಿ, ಪರಸಪ್ಪಾ ಚುನನ್ನವರ , ಪುಂಡಲಿಕಪ್ಪಾ ತಾಳಿಕೋಟಿ, ಡಾ ವಿಜಯ, ಶೀವು ಪಾಟೀಲ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA