ಗೋಕಾಕ : ಸತೀಶ ಜಾರಕಿಹೊಳಿಯವರ ವಿರುದ್ಧ ಪಿತೂರಿ ಮುಂದುವರೆದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮುಖಂಡರಾದ ವಿವೇಕ್ ಜತ್ತಿ ತಿಳಿಸಿದ್ದಾರೆ.

ನಿಪ್ಪಾಣಿಯಲ್ಲಿ ನಡೆದ ಮನೆ ಮನೆಗೆ ಬುದ್ದ ಬಸವ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಅವರ ಭಾಷಣದ ತುಣುಕೊಂದನ್ನು ಆಯ್ದುಕೊಂಡು ಜಾತ್ಯಾತೀತ ನಾಯಕನೊಬ್ಬರ ಅನೇಕ ಕಾರ್ಯಕ್ರಮಗಳನ್ನು ಹಿನ್ನಡೆಗೊಳಿಸುವ ಉದ್ದೇಶದಿಂದ ಬಿಜೆಪಿಯ ಕೆಲ ನಾಯಕರುಗಳು ಹಿಂದೂ ವಿರೋಧಿ ಭಾಷಣವೆಂದು ಬಿಂಬಿಸುವುದು ನಡೆಯುತ್ತಿದೆ ಹೀಗೆ ಮುಂದುವರೆದರೆ ಬೃಹತ್ ಅಭಿಮಾನಿಗಳೊಂದಿಗೆ ಹೋರಾಟ ಮಾಡುತ್ತೇವೆ ಎಂದು ಮುಖಂಡರಾದ ವಿವೇಕ್ ಜತ್ತಿ ತಿಳಿಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA