ಬೆಳಗಾವಿ: ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ವಿಫಲವಾಗಿದೆ. ಕಳೆದ ಬಾರಿಯೂ ಪ್ರವಾಹ ಪರಿಹಾರ ಕೊಡುವಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಪ್ರವಾಹ ಸೇರಿ ಎಲ್ಲ ವಿಷಯಗಳ ಚರ್ಚೆಗಾಗಿ ಅಧಿವೇಶನ ಕರೆಯುವಂತೆ ಒತ್ತಾಯ ಮಾಡಿದ್ದೇವೆ. ಅಧಿವೇಶದಲ್ಲಿ ಸರ್ಕಾರದ ವೈಫಲ್ಯಗಳ ಬಗ್ಗೆ ಧ್ವನಿ ಎತ್ತುವುದಾಗಿ ಹೇಳಿದರು.
ಕಂದಾಯ ಸಚಿವರು ಬೆಂಗಳೂರು ಬಿಡಲಿ!
ಕಳೆದ ಬಾರಿ ಭಾರೀ ಪ್ರವಾಹದಿಂದ ಮನೆ ಕಳೆದುಕೊಂಡ ಕೆಲವು ಸಂತ್ರಸ್ತರಿಗೆ ಇನ್ನು ಪರಿಹಾರ ದೊರೆತಿಲ್ಲ. ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಈ ಹಿಂದೆಯೂ ಕಂದಾಯ ಸಚಿವ ಆರ್. ಅಶೋಕ ಅವರು ಬೆಳಗಾವಿಯತ್ತ ಸುಳಿಯಲಿಲ್ಲ. ಈಗಲೂ ಇತ್ತ ಮುಖಮಾಡುತ್ತಿಲ್ಲ. ರಾಜಕೀಯ ವಿಚಾರವಾಗಿ ಮಾತ್ರ ಇವರಿಗೆ ಬೆಳಗಾವಿ ಬೇಕು. ಕಷ್ಟಕ್ಕೆ ಬೇಡ. ಕಂದಾಯ ಸಚಿವರು ಬೆಂಗಳೂರು ಬಿಟ್ಟು ಹೊರ ಬರಬೇಕು. ಅಧಿಕಾರಿಗಳಿಂದ ವರದಿ ಪಡೆದರೆ ಸಾಲದು. ಜನರ ಸಮಸ್ಯೆ ಆಲಿಸಬೇಕು. ಬೆಳಗಾವಿ, ವಿಜಯಪುರ ಪರಿಸ್ಥಿತಿ ಅರಿಯಬೇಕು. ಅಂದಾಗಲೇ ಜನರ ಸಮಸ್ಯೆ ಏನು ಅಂತಾ ಗೊತ್ತಾಗುತ್ತದೆ. ಇನ್ನಾದರು ಸಚಿವರು ಎಚ್ಚೆತ್ತುಕೊಂಡು ಬೆಂಗಳೂರು ಬಿಡಲಿ ಎಂದು ಸಲಹೆ ನೀಡಿದರು.
ಸತ್ಯಶೋಧನಾ ಸಮಿತಿಯಿಂದ ತನಿಖೆ!
ಡಿ.ಜೆ ಹಳ್ಳಿ ಪ್ರಕರಣದಲ್ಲಿ ಸುಮ್ಮನೆ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕುರಿಸುವ ಯತ್ನ ನಡೆದಿದೆ. ಘಟನೆಗೂ ಮೊದಲು ಠಾಣೆಗೆ ದೂರು ಕೊಡಲು ಬಂದವರಿಂದ ದೂರು ಸ್ವೀಕರಿಸಿದೇ ನಿರ್ಲಕ್ಷ್ಯವಹಿಸಲಾಗಿದೆ. ಬಿಜೆಪಿ ನಡೆಯಿಂದ ಸಂಶಯ ಮೂಡುತ್ತಿದೆ. ಹೀಗಾಗಿ ಪ್ರಕರಣ ತನಿಖೆಯನ್ನು ನಿವೃತ್ತ ನ್ಯಾಯಾಧೀಶಗೆ ವಹಿಸುವಂತೆ ಪಕ್ಷದ ನಾಯಕರ ಒತ್ತಾಯವಾಗಿದೆ. ನಮ್ಮ ಪಕ್ಷದ ವತಿಯಿಂದ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, ಜನರ ಅಭಿಪ್ರಾಯ ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ. ಸಮಿತಿ ವರದಿ ನೀಡಿದ ಬಳಿಕ ಸತ್ಯಸತ್ಯತೆ ಬಯಲಾಗುತ್ತದೆ ಎಂದು ಹೇಳಿದರು.