ಬೆಳಗಾವಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ: ಯುವ ನಾಯಕ ರಾಹುಲ್ ಜಾರಕಿಹೊಳಿ ಕರೆ
ನಾಗಾಲ್ಯಾಂಡ್ ಗೆ ಆಯ್ಕೆಯಾದ ಕುಸ್ತಿ ಪಟ್ಟುಗೆ ಆರ್ಥಿಕ ಸಹಾಯ ನೀಡಿ, ಶುಭಹಾರೈಸಿದ ರಾಹುಲ್ ಜಾರಕಿಹೊಳಿ,
ನಾಯಕ ರಾಹುಲ್ ಜಾರಕಿಹೊಳಿ ಅವರು 10 ಸಾವಿರ ರೂ. ಆರ್ಥಿಕ ಸಹಾಯ ನೀಡಿ, ಸನ್ಮಾನಿಸಿ ಶುಭಹಾರೈಸಿದರು.
ಕುಸ್ತಿ ಪಟ್ಟು ತರಬೇತಿ ನೀಡಿದ ನುರಿತ ತಜ್ಞರಾದ ಜಯವಂತ ನೀಲಜಕರ್, ಅಶೋಕ ಪಾಟೀಲ, ವಿನಾಯಕ ಕೇಸರಕರ್ ಮೂವರಿಗೆ ತಲಾ ಐದು ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಯಿತು.
ಹಂದಿಗನೂರು ಗ್ರಾಮದಲ್ಲಿ ಬಾಳಕೃಷ್ಣ ಯುವಕ ಮಂಡಳಿ ವತಿಯಿಂದ ಆಯೋಜಿಸಲಾದ ಬೃಹತ್ ಓಪನ್ ಮುಕ್ತ ಸಮೋಹ ನೃತ್ಯ-ಡ್ಯಾನ್ಸ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ಸಿಗದೇ ವಂಚಿತರಾಗುತ್ತಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಬೆಳಸುವ ಕಾರ್ಯಗಳಾಗಬೇಕಿದೆ. ಬಡಕುಟುಂಬದಲ್ಲಿ ಬೆಳೆದ ಮಕ್ಕಳು ಸಾಧೆನೆಗಾಗಿ ಕಾಯುತ್ತಿದ್ದಾರೆ. ಅವರಿಗೆ ಇಂತಹ ಕಾರ್ಯಕ್ರಮ ಆಸರೆಯಾಗಲಿವೆ ಎಂದರು.
ನೃತ್ಯ-ಡ್ಯಾನ್ಸ್ ಭಾರತೀಯ ಸಂಸ್ಕೃತಿಯ ಪ್ರತೀಕ. ನಾಡಿನ ಸಂಸ್ಕೃತಿಯನ್ನು ನಾವೆ ಬೆಳೆಸಬೇಕು. ಅವರಿಗೆ ಬೇಕಾದ ಆರ್ಥಿಕ ಸಹಾಯ-ಸಹಕಾರ ನೀಡಲು ಸತೀಶ ಜಾರಕಿಹೊಳಿ ಪೌಂಡೇಶನ ಹಗಲಿರುಳು ಕೆಲಸ ಮಾಡುತ್ತಿದೆ. ನಿಮ್ಮನ್ನು ಬೆಳೆಸಲು ನಿರಂತರವಾಗಿ ಶ್ರಮಿಸುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಮಾಜಿ ಸದಸ್ಯ ಸಿದ್ದಗೌಡ ಸುಣಗಾರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಾಗರ ಪಿಂಗಟ, ಎಪಿಎಮ್ಸಿ ಮಾಜಿ ಸದಸ್ಯ ಬಾಬುರಾವ್ ಪಿಂಗಟ, ಗ್ರಾಪಂ ಅಧ್ಯಕ್ಷ ಸುನೀಲ ಸುಣಗಾರ, ಉಪಾಧ್ಯಕ್ಷ ವರ್ಷಾ ಮುಚ್ಚಂಡಿ, ಸದಸ್ಯರಾದ ಸಿದ್ದು ಮುಚ್ಚಂಡಿ, ಪ್ರವೀಣ ರೇಡೆಕರ್ , ಕಾಕತಿ ದೇವಸ್ಥಾನ ಕಮೀಟಿ ಅಧ್ಯಕ್ಷರಾದ ಸಿದ್ಧಪ್ಪ ಟುಮರೆ , ರಾಮಣ್ಣ ಗುಳಿ, ಸಾಗರ ಪಿಂಗಟ, ಕಲ್ಲಪ್ಪಾ ಕಡೋಲಕರ್, ಕಲ್ಲಪ್ಪ ಪಾಟೀಲ, ದಯಾನಂದ ಬರಮಪ್ಪಾ ಪಾಟೀಲ, ಗ್ರಾಪಂ ಸದಸ್ಯರು ಹಾಗೂ ಇತರರು ಇದ್ದರು