ರಾಯಚೂರು: ರಾಜ್ಯ ಬಿಜೆಪಿ ಸರ್ಕಾರದ ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.
ರಾಯಚೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್ ಆಗಿದೆ, ಶ್ರೀಗಳು ಧರಣಿಗೆ ಕೂತಾಗಲೇ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ವಾಲ್ಮಿಕಿ ಸ್ವಾಮೀಜಿಗಳು 6 ತಿಂಗಳು ಧರಣಿ ಮಾಡಿದ್ದಾರೆ. ಈಗ ತರಾತುರಿಯಲ್ಲಿ ಸರ್ವಪಕ್ಷ ಸಭೆ ನಡೆಸಿ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿದ್ದಾರೆ. ಚುನಾವಣೆ ಹತ್ತಿರ ಬಂದಾಗಲ್ಲೆಲ್ಲಾಇದೆಲ್ಲವೂ ನಡೆಯುತ್ತೆ ಎಂದು ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.
ಭಾರತ ಜೋಡೋ ಪಾದಯಾತ್ರೆ ಒಂದು ಐತಿಹಾಸಿಕ ಪಾದಯಾತ್ರೆ. ಈ ರೀತಿಯ ಪಾದಯಾತ್ರೆ ನಾವು ಕಳೆದ 30-40 ವರ್ಷಗಳಲ್ಲಿ ಯಾವತ್ತು ನೋಡಿಲ್ಲ. ಭಾರತ ಜೋಡೋ ಪಾದಯಾತ್ರೆಗೆ ಕರ್ನಾಟಕದಲ್ಲಿ ಭಾರೀ ಬೆಂಬಲ ಸಿಕ್ಕಿದೆ. ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ಪಾದಯಾತ್ರೆ ಮಾಡಿದರು. ಆದರೆ ಈಗ ಸ್ವಾತಂತ್ರ್ಯ ದೊರಕಿದರೂ ಸ್ವಾತಂತ್ರ್ಯ ಸಿಕ್ಕಿರುವ ವಾತಾವರಣ ಕಾಣುತ್ತಿಲ್ಲ. ಆದಕಾರಣ ಭಾರತ ಜೋಡೋ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.”