ಬೆಳಗಾವಿ: ಬೆಳಗಾಂ ಶುಗರ್ಸ ಪ್ರೈ. ಲಿ. ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ಎಲ್ಲ ರೈತಭಾಂದವರಿಗೆ ಅನಂತ ಕೃತಜ್ಞತೆಗಳು, ತಮ್ಮ ಸಹಾಯ ಮತ್ತು ಸಹಕಾರದಿಂದಾಗಿ ಸತತ ಯಶಸ್ಸನ್ನು ಸಾಧಿಸುತ್ತಿದೆ ಪ್ರಸಕ್ತ 2022-23 ರ ಹಂಗಾಮನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಬೆಳಗಾಂ ಶುಗರ್ಸ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ತಿಳಿಸಿದರು.
ಪ್ರಸ್ತುತ ಹಂಗಾಮಿನಲ್ಲಿ ಕಾರ್ಖಾನೆಯ ಸುತ್ತ-ಮುತ್ತಲಿನ ಸುಮಾರು 80 ಕಿ.ಮಿ ಅಂತರದಲ್ಲಿರುವ ಕಬ್ಬು ಪ್ರದೇಶದಲ್ಲಿರುವ ಗುಣಮಟ್ಟದ ತಳಿಯ ಕಬ್ಬನ್ನು ಪಡೆಯಲಾಗುವುದು .
ಸನ್ 2020-21 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಭಾಂದವರಿಗೆ ಪ್ರತಿ ಟನ್ ಕಬ್ಬಿಗೆ ರೂ.2500/- ಗಳಷ್ಟು ಬಿಲ್ಲ್‍ನ್ನು ಮೂದಲನೇ ಕಂತಾಗಿ ಮತ್ತು ರೂ.100/- ಗಳಷ್ಟು ಹಣವನ್ನು ಎರಡನೇ ಕಂತಾಗಿ ಈಗಾಗಲೇ ನೀಡಲಾಗಿದ್ದು, ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿದಂತೆ, ಇನ್ನೂ ರೂ.50/-ಗಳಷ್ಟು ಹಣವನ್ನು ಮೂರನೆ ಕಂತಾಗಿ ನೀಡಲು ನಿರ್ಧರಿಸಲಾಗಿದೆ. ಇದರೂಂದಿಗೆ ಸನ್ 2020-21 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಭಾಂದವರಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟಾರೆಯಾಗಿ ರೂ.2650/-ಗಳಷ್ಟು ದರವನ್ನು ನೀಡಿದಂತಾಗುತ್ತದೆ.
ಸನ್ 2021-22 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತ ಬಾಂದವರಿಗೆ ಈಗಾಗಲೇ ರೂ.2600/-ಗಳಷ್ಟು ದರವನ್ನು ನೀಡಲಾಗಿದ್ದು, ಎರಡನೇ ಕಂತಾಗಿ ರೂ.100/-ಗಳಷ್ಟು ಹಣವನ್ನು ನೀಡಲು ನಿರ್ಧರಿಸಲಾಗಿದೆ. ಇದರೂಂದಿಗೆ ಸನ್ 2021-22 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಭಾಂದವರಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟಾರೆಯಾಗಿ ರೂ.2700/- ಗಳಷ್ಟು ದರವನ್ನು ನೀಡಿದಂತಾಗುತ್ತದೆ.
ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುರಿ ಸಾಧಿಸುವ ನಿರೀಕ್ಷೆ ಹೂಂದಿದ್ದು, ಇದು ರೈತಭಾಂದವರ ಸಹಾಯ ಮತ್ತು ಸಹಕಾರ ದಿಂದ ಮಾತ್ರ ಸಾಧ್ಯವಾಗಲಿದ್ದು, ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತಬಾಂದವರು ಈ ಹಿಂದೆ ಹೆಚ್ಚು ಕಬ್ಬು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಿದಂತೆ ಪ್ರಸಕ್ತ ಹಂಗಾಮಿನಲ್ಲಿಯೂ ಒಳ್ಳೆಯ ಗುಣಮಟ್ಟ, ಒಳ್ಳೆಯ ರಿಕವರಿ ಇರುವ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಯಶಸ್ಸಿನಲ್ಲಿ ಭಾಗಿಯಾಗುವಿರೆಂದು ಆಶಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.