ಬೆಳಗಾವಿ: ಪ್ರಸಕ್ತ 2022-23ರ ಹಂಗಾಮಿಗೆ ಅ. 11 ರಂದು ಬೆಳಗ್ಗೆ 10:30ಕ್ಕೆ ಜಿಲ್ಲೆಯ ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಕಬ್ಬು ನುರಿಸುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವರು ಎಂದು ಸತೀಶ್ ಶುಗರ್ಸ್ ಚೇರಮನ್ ಹಾಗೂ ಸಿ.ಎಫ್.ಒ ಪ್ರವೀಣಕುಮಾರ ತಿಳಿಸಿದ್ದಾರೆ.
ಸತೀಶ ಶುಗರ್ಸ್ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ಎಲ್ಲ ರೈತ ಬಾಂಧವರಿಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ನಮ್ಮ ಕಾರ್ಖಾನೆಯು ಕಬ್ಬು ಪೂರೈಸಿದ ರೈತ ಬಾಂಧವರ ಸಹಾಯ ಮತ್ತು ಸಹಕಾರದಿಂದಾಗಿ ಸತತ ಯಶಸ್ಸನ್ನು ಸಾಧಿಸುತ್ತಿದ್ದು, ಪ್ರಸ್ತುತ ಹಂಗಾಮಿನಲ್ಲಿ ಕಾರ್ಖಾನೆಯ ಸುತ್ತ-ಮುತ್ತಲಿನ ಸುಮಾರು 60 ಕಿ.ಮಿ ಅಂತರದಲ್ಲಿರುವ ಕಬ್ಬು ಪ್ರದೇಶದಿಂದ ಉತ್ತಮ ತಳಿಯ ಕಬ್ಬನ್ನು ಪಡೆಯಲಾಗುವುದು ಎಂದು ಹೇಳಿದ್ದಾರೆ.
ಸನ್ 2020-21ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತ ಬಾಂಧವರಿಗೆ ಪ್ರತಿ ಟನ್ ಕಬ್ಬಿಗೆ ರೂ. 2500/- ಗಳಷ್ಟು ಬಿಲ್ ನ್ನು ಮೂದಲನೇ ಕಂತಾಗಿ ಮತ್ತು ರೂ.170/- ಗಳಷ್ಟು ಹಣವನ್ನು ಎರಡನೇ ಕಂತಾಗಿ ಈಗಾಗಲೇ ನೀಡಲಾಗಿದ್ದು, ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿದಂತೆ, ಇನ್ನೂ ರೂ.30/- ಗಳಷ್ಟು ಹಣವನ್ನು ಮೂರನೆ ಕಂತಾಗಿ ನೀಡಲು ನಿರ್ಧರಿಸಲಾಗಿದೆ. ಇದರೂಂದಿಗೆ ಸನ್ 2020-21 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತ ಬಾಂಧವರಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟಾರೆಯಾಗಿ ರೂ.2700/- ಗಳಷ್ಟು ದರವನ್ನು ನೀಡಿದಂತಾಗುತ್ತದೆ.
ಸನ್ 2021-22 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತ ಬಾಂಧವರಿಗೆ ಈಗಾಗಲೇ ರೂ.2700/- ಗಳಷ್ಟು ದರವನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಎರಡನೇ ಕಂತಿನ ಹಣವನ್ನು ಘೋಷಣೆ ಮಾಡಲಾಗುವುದು.
ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುರಿ ಸಾಧಿಸುವ ನಿರೀಕ್ಷೆ ಹೂಂದಿದ್ದು, ಇದು ರೈತಬಾಂದವರ ಸಹಾಯ ಮತ್ತು ಸಹಕಾರ ದಿಂದ ಮಾತ್ರ ಸಾಧ್ಯವಾಗಲಿದ್ದು, ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತಬಾಂದವರು ಈ ಹಿಂದೆ ಹೆಚ್ಚು ಕಬ್ಬು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಿದಂತೆ ಪ್ರಸಕ್ತ ಹಂಗಾಮಿನಲ್ಲಿಯೂ ಒಳ್ಳೆಯ ಗುಣಮಟ್ಟ, ಒಳ್ಳೆಯ ರಿಕವರಿ ಇರುವ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಯಶಸ್ಸಿನಲ್ಲಿ ಭಾಗಿಯಾಗುವಿರೆಂದು ಆಶಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.