ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸತೀಶ ಜಾರಕಿಹೊಳಿ ಸನ್ಮಾನ
ಬೆಳಗಾವಿ: “ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅವಶ್ಯವಿದೆ. ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪೋಷಕರು ಶ್ರಮಿಸಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕರೆ ನೀಡಿದರು.
ಇಲ್ಲಿನ ಗಾಂಧಿ ನಗರದ ಭಂಟರ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ನದಾಫ, ಪಿಂಜಾರ್ ಸಂಘ ಟನೆ ವತಿಯಿಂದ ಆಯೋಜಿಸಲಾದ ಬೆಳಗಾವಿ ತಾಲೂಕಾ ಮಟ್ಟದ ಸಮಾವೇಶದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಸತ್ಕಾರ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಮಕ್ಕಳು ಉದ್ಯೋಗ ಪಡೆದುಕೊಳ್ಳಬೇಕೆಂದರೆ ಶಿಕ್ಷಣದ ಮೇಲೆ ನಿಂತಿದೆ. ಪೋಷಕರು ಇವಾಗಿನಿಂದಲೇ ಮಕ್ಕಳಿಗೆ ಅಡಿಪಾಯ ಹಾಕಬೇಕು. ಮಕ್ಕಳು ಕೂಡ ತಂದೆ-ತಾಯಿಯ ಕನಸನ್ನು ಈಡೇಸುವ ನಿಟ್ಟಿನಲ್ಲಿ ಹಗಲಿರುಳು ವಿದ್ಯಾಭ್ಯಾಸದತ್ತ ಹರಿಸಬೇಕು ಎಂದರು.
ನೀವು ಬದಲಾಗಿ ಸಮಾಜವನ್ನು ಬದಲಿಸಿ
ನೀವು ಬದಲಾಗಬೇಕು ಸಮಾಜವನ್ನು ಬದಲಿಸುವ ಪ್ರಯತ್ನವಾಗಬೇಕು ಸಮುದಾಯದ ಅಭಿವೃದ್ಧಿ ಶ್ರಮಿಸಿ. ಆದಷ್ಟೂ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಿರಿ. ಶಿಕ್ಷಣದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯವಾಗಬೇಕು. ನಿಮ್ಮ ಭವಿಷ್ಯ ಉಜ್ವಲವಾಗಲೆಂದು ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಮಾಜದ ಮುಖಂಡರಾದ ಸಿದ್ದೀಕ್ ಅಂಕಲಗಿ ಮಾತನಾಡಿ, ನದಾಪ, ಪಿಂಜಾರ್ ಸಮುದಾಯದ ಬಹಳಷ್ಟು ಹಿಂದುಳಿದಿದೆ. ಹೀಗಾಗಿ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮಾಜದ ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಒದಗಿಸುವ ಕಾರ್ಯವನ್ನು ಪೋಷಕರು ಮಾಡಬೇಕು. ಸಮುದಾಯದಿಂದ ಸಹಕಾರ ನೀಡಲಾವುದು ಎಂದು ಭರವಸೆ ನೀಡಿದರು.
ನ್ಯಾಯಾಧೀಶ ಅಪ್ತಾಲಾಲ್ ನದಾಫ್ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ದೊಡ್ಡ ನಾಯಕರಿಂದ ನಮ್ಮ ಸಮಾಜಕ್ಕೆ ಬೆಳಗಾವಿಯಲ್ಲಿ ನಿವೇಶನ ನೀಡಬೇಕು ರಾಜ್ಯ ನದಾಫ, ಪಿಂಜಾರ್ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ನದಾಫ, ಪಿಂಜಾರ್ ಸಂಘದ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಶೇಖ್ ಸಂಘದ ತಾಲೂಕಾಧ್ಯಕ್ಷ ಹಜರತ್‍ಸಾಬ್ ನದಾಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರಾದ ಸಿದ್ದೀಕ್ ಅಂಕಲಗಿ, ಮುದಸ್ಸರ ನದಾಫ್, ಜಾವೇದ್ ನದಾಫ್, ಪ್ರಾಚಾರ್ಯ ಡಾ.ಎಚ್.ಐ.ತಿಮ್ಮಾಪುರ, ರಫಿಕ್ ನದಾಫ್, ಶಮೀನಾ ನದಾಫ್, ಹಾಫಿಜ್ ರಹಮತುಲ್ಲಾ ಶೇಖ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.