ಗೋಕಾಕ: ಇಡೀ ಜಾರಕಿಹೊಳಿ ಕುಟುಂಬ ಕೂಡಿ ಸರ್ಕಾರವನ್ನುಉರುಳಿಸಿದ್ದಾರೆ ಎಂದು ಭಾಷಣಕಾರರು ಹೇಳಿದ್ದಾರೆ. ಜಾರಕಿಹೊಳಿ ಕುಟುಂಬ ಕೂಡಿ ಯಾವುದೇ ರೀತಿ ಸರ್ಕಾರ ಉರುಳಿಸಿಲ್ಲ. ಇದರಲ್ಲಿ ನನಗೂ, ಬಾಲಚಂದ್ರ ಹಾಗೂ ಲಖನ್ ಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸದ ಅವರು, ಸರ್ಕಾರ ಬೀಳುಸುವಲ್ಲಿ ಯಾರ ಪಾತ್ರವಿದೆಯೋ ಅವರಿಗೆ ಮಾತ್ರ ಆ ಮಾತು ಹೋಗಲಿ. ಅದನ್ನು ಬಿಟ್ಟು ಸರ್ಕಾರ ಬೀಳಿಸುವದರಲ್ಲಿಇಡಿ ಜಾರಕಿಹೊಳಿ ಕುಟುಂಬವಿದೆ ಎಂದು ಹೇಳುವುದು ಸರಿಯಲ್ಲ. ಇದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆದ್ದರಿಂದ ಇಂಥ ಮಾತುಗಳಾಡುವ ಮೊದಲು ಸರಿಯಾಗಿ ಮಾತನಾಡಬೇಕು. ರಾಜ್ಯ ರಾಜಕಾರಣದಲ್ಲಿ ನಾಲ್ವರೂ ಸಹೋದರರು ರಾಜಕೀಯದಲ್ಲಿ ಇದ್ದೇವೆ. ನಾಲ್ವರು ಒಂದೇ ಎಂದು ಭಾವಿಸಬೇಡಿ. ನಾಲ್ವರ ಕೆಲಸವೂ ಬೇರೆ ಬೇರೆ ಇದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಹೇಳಿದರು.
ಮೀಸಲಾತಿ ನೀಡಲು ಸರ್ಕಾರ ಮಲತಾಯಿ ಧೋರಣೆ: “ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡುವಲ್ಲಿ ಬಿಜೆಪಿ ಸರ್ಕಾರ ಹಿಂದೇಟ್ಟು ಹಾಕುತ್ತಿರುವ ಕಾರಣಕ್ಕಾಗಿ ಅ.9 ರಂದು ಸರ್ಕಾರದಿಂದ ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಜ್ಯಾದ್ಯಂತ ಬಹಿಷ್ಕಾರ ಮಾಡಲಾಗುವುದು ಎಂದು ಈಗಾಗಲೇ ರಾಜ್ಯ ಮಟ್ಟದಲ್ಲಿ ತಿರ್ಮಾಣಿಸಲಾಗಿದೆ. ರಾಜನಹಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಕೂಡಾ ಕಳೆದ 224 ದಿನಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿನ ಮೀಸಲಾತಿ ಸಿಗಬೇಕೆಂದು ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಇಚ್ಚಾಶಕ್ತಿ ಕೊರತೆಯಿಂದ ಭರವಸೆ ಈಡೇರಿಲ್ಲ.ಹೀಗಾಗಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮಾತು ತಪ್ಪಿದ ಶ್ರೀರಾಮುಲು: ಸಚಿವ ಶ್ರೀರಾಮುಲು ಅವರು ಸಚಿವ ಸ್ಥಾನ ಸಿಕ್ಕಕೂಡಲೇ 24 ಗಂಟೆಯಲ್ಲೇ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದರು. ಈಗ ಅವರ ಅವಧಿ ಕೂಡಾ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೂ ಕೂಡಾ ಈ ವಿಚಾರಕ್ಕೆ ಸಂಭಂದಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬರೀ ರಾಜಕೀಯ ಆಶ್ವಾಸನೆ ಮಾತ್ರ ಎಂದು ಕಿಡಿ ಕಾರಿದರು.”
CKNEWSKANNADA / BRASTACHARDARSHAN CK NEWS KANNADA