Breaking News

ಸತೀಶ ಜಾರಕಿಹೊಳಿ ಹೆಸರಲ್ಲಿ ವಿವಾದಾತ್ಮಕ ಪೋಸ್ಟ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲು


ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಹೆಸರಿನಲ್ಲಿ ಬ್ರಾಹ್ಮಣವಾದ ರಾಮ ಮಂದಿರ ಹೋರಾಟದಲ್ಲಿ ಸತ್ತ ಹೆಚ್ಚಿನವರು ಓಬಿಸಿಗಳು, ಒಬ್ಬನೇ ಒಬ್ಬ ಬ್ರಾಹ್ಮಣ ಸಾಯಲಿಲ್ಲ. ಆದರೆ ಈಗ ಮಂದಿರದ ಟ್ರಸ್ಟ್‌ನ ಪದಾಧಿಕಾರಿಗಳೆಲ್ಲ ಬ್ರಾಹ್ಮಣರು, ಒಬ್ಬನು ಓಬಿಸಿ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸತೀಶ ಜಾರಕಿಹೊಳಿ ಅವರ ಹೆಸರನ್ನು ಕೆಡಿಸುವ ದುರುದ್ದೇಶ ಹೊಂದಲಾಗಿದೆ. ಈ ಪೋಸ್ಟ್ ಕುರಿತು ಸೂಕ್ತ ತನಿಖೆ ನಡೆಸುವಂತೆ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ಬಸಪ್ಪ ತಳವಾರ ಅವರು ಬೆಳಗಾವಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಮಾಜ ಸೇವಕನಾಗಿರುವ ನಾನು ಕಳೆದ ೧೦ ವರ್ಷಗಳಿಂದ ಸತೀಶ ಜಾರಕಿಹೊಳಿ ಅವರ ಜೊತೆಗೆ ಒಡನಾಟ ಹೊಂದಿದ್ದೇನೆ. ಸತೀಶ ಜಾರಕಿಹೊಳಿ ಅವರ ಹೆಸರನ್ನು ಕೆಡಿಸುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸಬುಕ್‌ನಲ್ಲಿ ಕಿಡಿಗೇಡಿಗಳು ಸತೀಶ ಜಾರಕಿಹೊಳಿ ಅವರ ಹೆಸರಿನಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ಹರಿಬಿಡುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ತನಿಖೆ, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಳವಾರ ಒತ್ತಾಯಿಸಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಎರಡು ಗ್ಯಾಂಗ್ 9 ಜನ ಡಕಾಯಿತರನ್ನು ಬಂಧಿಸಿ; ಚಿನ್ನಾಭರಣ,ನಗದು ಹಣ, ವಾಹನಗಳ ವಶಕ್ಕೆ ಪಡೆದ ಗೋಕಾಕ ಪೋಲಿಸ್!

ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ