ಗೋಕಾಕ:.ಸತೀಶ ಎಲ್ ಜಾರಕಿಹೊಳಿ, ಶಾಸಕರು ಯಮಕನಮರಡಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೇಸ ಪಕ್ಷದ ಕಾರ್ಯಾಧ್ಯಕ್ಷರ ನಿರ್ದೇಶನ ಮತ್ತು ಆದೇಶದ ಮೇರೆಗೆ ಶ್ರೀ.ಬಿ. ಕೆ. ಕಂಟಕಾರ ವಕೀಲರು, ಇವರನ್ನು ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲು ಹರ್ಷಿತನಾಗಿದ್ದೇನೆ.
ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಶಿಸ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುವುದು,ತಾವು ಈ ಕೂಡಲೇ ತಮ್ಮ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷ ಸಂಘಟನೆಯ ಕೆಲಸದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಕಾಂಗ್ರೇಸ ಪಕ್ಷದಲ್ಲಿ ಕಾನೂನು ಮತ್ತು ಮಾನವ ಹಕ್ಕುಗಳ ಘಟಕವನ್ನು ಸಂಘಟಿಸಿ, ಹೆಚ್ಚಿನ ಸಂಖ್ಯೆಯಲ್ಲಿ, ಸದಸ್ಯರನ್ನು ನೊಂದಾಯಿಸಿಕೊಂಡು ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕೆಂದು ಸೂಚಿಸಿದ್ದೇನೆ. ಈ ನಿಟ್ಟಿನಲ್ಲಿ ಹೆಚ್ಚಿನ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿವೇಕ್ ಜತ್ತಿ, ವಿಜಯ ಗಜ್ಜಿ ,ಗೌಸ್ಮೋದಿನ ರಫಾಯಿ, ಪ್ರಭು ಅವರಾಧಿ, ಶಿವರಾಯ ಪಾಟೀಲ, ಹಾಗೂ ನೀಲಕಂಠ ತೋಟಗಿ , ಬಾನಪ್ಪಾ ಬಿರನಗಡ್ಡಿ ಮಹಾದೇವ ಪೂಜಾರಿ ,ಮಾರುತಿ ಪೂಜಾರಿ ,ಮುದಾಸಾರ ಮನೆಯರ, ಮಹ್ಮದಪಾರುಕ ಪಿರಜಾದೆ, ಲಕ್ಷ್ಮಣ ಬಿದರಿ, ಬಸವರಾಜ ಗಲಗಲಿ, ಬಾಬು ಮುಲ್ಲಾ, ಮಲ್ಲಿಕಜಾನ ಮಿರಜಾಬಾಯಿ, ಚಂದ್ರಶೇಖರ ತೇರದಾಳ , ರವಿ ಕೊಪ್ಪದ, ಉದಯಕುಮಾರ ಬನ್ನಿಶೆಟ್ಟಿ, ರಾಯಪ್ಪಾ ಸಾನ್ವಿ ,ಅಜಯ್ ಬೆನಚನಮರಡಿ, ಮಾರುತಿ ಭಜಂತ್ರಿ, ಅನೇಕ ಸದಸ್ಯರು ಉಪಸ್ಥಿತರಿದ್ದರು.
.