ಗೋಕಾಕ : ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆಯುತ್ತಿರುವ ಕಬ್ಬಡ್ಡಿ ಪಂದ್ಯಾವಳಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿಕ್ಷೀಸಿದರು.
ಇಂದು ಮಮದಾಪುರ ಹಾಗೂ ಗೋಕಾಕ ತಂಡಗಳ ನಡುವೆ ಫೈನಲ್ ಪಂದ್ಯವಿದ್ದು, ಈ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಟಾಸ್ ಹಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು.

ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಬೋಧನೆಯ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವಂತಿಕೆಯ ಜೀವನ ಸಾಗಿಸಲು ಮುಂದಾಗಬೇಕೆಂದು.ಗ್ರಾಮೀಣ ಕ್ರೀಡೆಗಳಿಗೆ ಯುವ ಜನತೆ ಹೆಚ್ಚಿಗೆ ಆಧ್ಯತೆ ನೀಡಿ, ಭಾಗವಹಿಸಿ ಸದೃಢರಾಗಿ ಎಂದರು.
CKNEWSKANNADA / BRASTACHARDARSHAN CK NEWS KANNADA