ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಗೋಕಾಕ ಕ್ಷೇತ್ರದ ಸಮುದಾಯ ಭನಗಳಿಗೆ ಕುರ್ಚಿ ಮತ್ತು ಸೌಂಡ ಸಿಸ್ಟಮ್ ವಿತರಿಸಿದ ರಾಹುಲ್ ಜಾರಕಿಹೊಳಿ
ಗೋಕಾಕ: ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಭಾನುವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸೂಚನೆಗೆ ಮೇರೆಗೆ ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಗೋಕಾಕ ವಿಧಾನಸಭಾ ಮತಕ್ಷೇತ್ರದ ವಿವಿಧ ಗ್ರಾಮಗಳ ಸಮುದಾಯ ಭವನ, ಚರ್ಚ ಹಾಗೂ ಮಸೀದಿ ಗಳಿಗೆ ಕುರ್ಚಿ ಮತ್ತು ಸೌಂಡ ಸಿಸ್ಟಮ್ ಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿದರು.
ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ, ಸತೀಶ ಫೌಂಡೇಶನದಿಂದ ಈಗಾಗಲೇ ಜಿಲ್ಲಾದ್ಯಂತ ಸಮಾಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಯುತ್ತಿವೆ. ಬಡ ಮಕ್ಕಳ ವಿದ್ಯಾಭ್ಯಾಸ ಜತೆ ಸಮಾಜ ಪ್ರಗತಿಗೆ ಶ್ರಮಿಸುತ್ತಿದ್ದೆವೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಬಡಮಕ್ಕಳಿದ್ದಾರೆ, ಅವರು ಭವಿಷ್ಯ ರೂಪಿಸಿಕೊಳ್ಳಲು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆ ಮಕ್ಕಳಿಗೆ ಸಹಕಾರ ನೀಡಿ, ಬೆಂಬಲಿಸುವ ಪ್ರಯತ್ನ ಮಾಡಲಾಗುತ್ತಿದೆ. ತಂದೆಯವರ ಮಾರ್ಗದರ್ಶನದಲ್ಲಿ ಘಟಪ್ರಭಾ ಸೇವಾದಳದಲ್ಲಿ ಮಕ್ಕಳಿಗೆ ಉಚಿತ ಸೈನಿಕ, ಪೊಲೀಸ್ ತರಬೇತಿಯನ್ನು ನೀಡಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಒಳ್ಳೆಯ ಯಶಸ್ಸು ಕಾಣಬೇಕು ಎಂದು ಹೇಳಿದರು.
ಗೋಕಾಕ ವಿಧಾನಸಭಾ ಮತಕ್ಷೇತ್ರದ ಹೂಲಿಕಟ್ಟಿ, ಮಕ್ಕಳಗೇರಿ , ಗೋಕಾಕ , ಹಿರೇನಂದಿ, ಮಮದಾಪೂರ, ಕೊಣ್ಣೂರ, ಸಾವಳಗಿ ಗ್ರಾಮದ ಎಲ್ಲಾ ಸಮುದಾಯಗಳಿಗೆ ಮತ್ತು ಸೌಂಡ ಸಿಸ್ಟಮ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಗ್ರಾಮಸ್ಥರು ಹಾಗು ಮುಖಂಡರು ಇತರರು ಇದ್ದರು.