ಗೋಕಾಕ: ನಮ್ಮ ನಾಡು ಅಷ್ಟೇ ಏಕೆ, ಇಡಿ ದೇಶದ ಗಮನ ಸೆಳೆದ ವೀರ ರಾಣಿ ಚನ್ನಮ್ಮನ ನಾಡಿನ ಐತಿಹಾಸಿಕ ಮಹತ್ವ ಸಾರುವ ಕಿತ್ತೂರು ಕೋಟೆಯ ಪ್ರತಿರೂಪವನ್ನು ಬೇರಡೆ ನಿರ್ಮಾಣ ಮಾಡುವ ಸರ್ಕಾರದ ನಿಲುವು ಖಂಡನೀಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಿತ್ತೂರು ಕೋಟೆ ಪ್ರತಿರೂಪ ಮೂಲ ಸ್ಥಳ ಬಿಟ್ಟು ಬೇರೆಡೆ ನಿಯೋಜನೆ ಮಾಡುತ್ತಿರುವ ಬಗ್ಗೆ ಈಗ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಸ್ಥಳೀಯ ಸಾಮೀಜಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು ಒಂದು ಉತ್ತಮ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ತಿಳಿ ಹೇಳಿದರು.
ಕಿತ್ತೂರು ಕೋಟೆ ಬರೀ ಜಿಲ್ಲೆಗೆ ಅಷ್ಟೆ ಅಲ್ಲ, ಇಡೇ ದೇಶದಲ್ಲೇ ಹೆಸರುವಾಸಿಯಾಗಿದೆ. ಇಂತಹ ಕಿತ್ತೂರು ಕೋಟೆ ಪ್ರತಿರೂಪವನ್ನು 200ಕೋಟಿ ವೆಚ್ಚದಲ್ಲಿ ಬೇರೆಡೆ ನಿರ್ಮಿಸಲು ನಿರ್ಧರಿಸಿರುವ ಸರ್ಕಾರ ನಿಲುವಿನಿಂದ ಅಲ್ಲಲ್ಲಿ ಸ್ವಾಮೀಜಿಗಳ ಹಾಗೂ ಕನ್ನಡ ಸಂಘಟನೆಗಳ ಹೋರಾಟದ ಕಿಚ್ಚು ಹೆಚ್ಚುತ್ತಿದೆ. ಶೀಘ್ರವೇ ಸರ್ಕಾರ ಎಚ್ಚೆತ್ತಕೊಂಡು ಕಿತ್ತೂರು ಕೋಟೆ ಪ್ರತಿರೂಪ ಕಿತ್ತೂರಿನಲ್ಲೇ ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದರು.