ಬೆಳಗಾವಿ: ಹಿಂದೆ ಧರ್ಮ, ಜಾತಿಗಳ ಆಧರದ ಮೇಲೆ ಕಸಬುಗಳನ್ನು ನಿರ್ದಿಷ್ಟ ಪಡಿಸಿದ್ದರು. ಇದರಿಂದ ಹೊರಗೆ ಬರಲು ನಮಗೆ ಅವಕಾಶ ಇರಲಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಜಾರಿಗೆ ತಂದ ನಂತರ ನಾವು ಸ್ವಾತಂತ್ಯ್ರರಾದೇವು. ಯಾವುದೇ ಕ್ಷೇತ್ರದಲ್ಲಿ ಯಾವುದೇ ಹುದ್ದೆಗಳನ್ನು ಯಾವುದೇ ಜಾತಿಯವರು ಪಡೆಯಲು ಸಾಧ್ಯವಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಕೃಷ್ಟಜನ್ಮಾಷ್ಟಮಿ ಕಾರ್ಯಾಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅವತ್ತಿನ ಕಾಲಗಟ್ಟದಲ್ಲಿ ಶ್ರೀಕೃಷ್ಟನ ವಿಚಾರಗಳು ಪ್ರಸ್ತುತವಾಗಿದ್ದವು. ಆದರೆ ಇದೀಗ ಸಮಾಜದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚು ಚಿಂತೆನೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ದಾರಿ ಹೋರಾಟ ಮಾಡಿ ಸರ್ಕಾರದ ಮುಂದೆ ಬೇಡಿಕೆ ಇಡಬೇಕೆಂದು ತಿಳಿಸಿದರು.
ಹಿಂದೆ ನಾವು ಬೇಟೆ ಆಡಬೇಕಿತ್ತು. ಯಾದವರು ಜಾನುವಾರಗಳನ್ನು ಪೋಷಣೆ ಮಾಡಬೇಕಿತ್ತು. ಮೀನುಗಾರರು ಮೀನು ಹಿಡಿಯಬೇಕಿತ್ತು. ಇಂತಹ ಹಲವು ನಿರ್ಭಂದಗಳನ್ನು ಹಿಂದಿನ ವ್ಯವಸ್ಥೆಯಲ್ಲಿ ಇತ್ತು. ಆದರೆ ಸಂವಿಧಾನ ಜಾರಿಯಾದ ಬಳಿಕ ಬೇಟೆ ಆಡುವನು ಐಎಎಸ್, ಐಪಿಎಸ್ ಆಗುವ ಅವಕಾಶ ದೊರಕಿದೆ. ಅದಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಪಟ್ಟಿ ಅಜ್ಜ, ಶೀತಲ್ ಮುಂಡೆ, ಬಸವರಾಜ ಹಮನವರ್, ಜಯಗೌಡ ಪಾಟೀಲ, ಬಿ.ಟಿ. ಪಾಟೀಲ್, ರಮೇಶ ಹುಕೇರಿ, ಆನಂದ್ ಚೌಗಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.