“ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಚಿಕ್ಕೋಡಿ ವಿಭಾಗದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಆದೇಶದ ಮೇರೆಗೆ ಚಿಕ್ಕೋಡಿ ಜಿಲ್ಲಾ ಎಸ್ ಟಿ ವಿಭಾಗದ ಉಪಾಧ್ಯಕ್ಷರಾಗಿ ವಿಕ್ರಮ ಕೊಡಜೋಗಿ ನೇಮಕ ಮಾಡಲಾಗಿದೆ.
ನಗರದ ಹಿಲ್ ಗಾರ್ಡನ್ ಆವರಣದಲ್ಲಿಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಚಿಕ್ಕೋಡಿ ಜಿಲ್ಲಾ ಎಸ್ ಟಿ ವಿಭಾಗದ ಉಪಾಧ್ಯಕ್ಷರಾಗಿ ನೇಮಕರಾದ ವಿಕ್ರಮ ಕೊಡಜೋಗಿ ಅವರಿಗೆ ಅಧಿಕೃತ ನೇಮಕ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಎಸ್.ಟಿ ಘಟಕದ ಅಧ್ಯಕ್ಷ ಬಾಳೇಶ ನಿಂ ದಾಸನಟ್ಟಿ ಮಂಜುನಾಥ್ ಪಾಟೀಲ್, ರಾಜು ದರಶೆಟ್ಟಿ,ಪಾಂಡು ಮನ್ನಿಕೇರಿ, ವಿನೋದ್ ಡೊಂಗರೆ, ಮಾರುತಿ ಗುಟಗುದ್ದಿ, ಯಮಕನಮರಡಿಯ ಎಸ್.ಟಿ.ಘಟಕದ ಅಧ್ಯಕ್ಷ ಬಸವರಾಜ ಡುಮ್ಮನಾಯಿಕ, ಕಾಂಗ್ರೆಸ್ ಮುಖಂಡ ಅಬ್ದುಲಗನಿ ದರ್ಗಾ, ಮಕ್ತುಮ ದೇಸಾಯಿ, ಅಶ್ಹಾಕ ದರ್ಗಾ, ಮೀರು ಅತ್ತಾರ, ಸುರೇಶ್ ಬಸನಾಯಿಕ, ಭೀಮಪ್ಪ ಪೂಜೇರಿ, ಲೋಹಿತ ಅದೆಮನಿ,ಅಜೀತ್ ಅದೆಮನಿ, ನದಿಮ ಅತ್ತಾರ, ಪ್ರಕಾಶ್ ಪಾಟೀಲ್, ಬಸು ಬಸನಾಯಿಕ, ಇರ್ಪಾದ ಪನ್ನಿಬಂದ, ಸಲ್ಲಾವುದ್ದಿನ ಮುಲ್ಲಾ, ಕಾಂಗ್ರೆಸ್ ಮುಖಂಡರು ಸೇರಿದಂತೆ ಇತರರು ಇದ್ದರು.”