ಯಮಕನಮರಡಿ ಕ್ಷೇತ್ರದಲ್ಲಿ ರಾಹುಲ್ ಜಾರಕಿಹೊಳಿ ಅವರು ಪಾದಯಾತ್ರೆ: ಜಿ.ಪಂ ಕ್ಷೇತ್ರಗಳಾದ ಹೆಬ್ಬಾಳ, ಕೊಚ್ಚರಿ, ಅರ್ಜುನವಾಡ, ಕುರಣಿವಾಡಿ, ಚಿಕ್ಕಾಲಗುಡ್ಡ, ಉ. ಖಾನಾಪೂರ, ಹಂಚಿನಾಳ ಮಾರ್ಗದ ಉದ್ದಕ್ಕೂ ರಾಹುಲ್ ಜಾರಕಿಹೊಳಿ ಪಾದಯಾತ್ರೆ ನಡೆಸಿ, ಮಾಜಿ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ.
ಯಮಕನಮರಡಿ: ” ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ದೇಶವನ್ನು ಕಟ್ಟಲು ಕಾಂಗ್ರೆಸ್ ಹಿರಿಜೀವಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು” ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ “ಹರ್ ಘರ್ ತಿರಂಗಾ’ ಅಭಿಯಾನದ ನಿಮಿತ್ತ ಕಾಂಗ್ರೆಸ್ ಪಕ್ಷದಿಂದ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಲ್ಲಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
” ದೇಶಕ್ಕೆ ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಮನಮೋಹನ್ ಸಿಂಗ್ ಅವಧಿಯವರೆಗೂ ದೇಶದ ಜನರ ಅಭಿವೃದ್ಧಿಗಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಅಂತಹ ಮಹಾನ್ ನಾಯಕರನ್ನು ನೆನೆದು ಬಾಳಬೇಕು ಎಂದು ರಾಹುಲ್ ಜಾಕರಿಹೊಳಿ ಹೇಳಿದರು.
ಸೈನಿಕರನ್ನು ನಿತ್ಯವೂ ಪೂಜಿಸಿ: ದೇಶದ ಭದ್ರತೆಗಾಗಿ ತಮ್ಮ ತಂದೆ-ತಾಯಿ ಈಡಿ ಕುಟುಂಬವನ್ನು ತೊರೆದು ನಮ್ಮಗಾಗಿ ಹಗಲಿರುಳು ಗಡಿಯಲ್ಲಿ ಶ್ರಮಿಸುವ ನಮ್ಮ ಯೋಧರನ್ನು ನಿತ್ಯವೂ ಪೂಜಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿ ದೇಶವನ್ನು ಮಗುನಂತೆ ಕಾಪಾಡಿಕೊಂಡು ಬಂದಿರುವವರು ಸೈನಿಕರು, ಅವರಿಗೆ ಗೌರವ ಕೋಡುವುದು ಭಾರತೀಯ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ದೇಶಾಭಿಮಾನ ಇರಲಿ: ರಾಹುಲ್ ಜಾರಕಿಹೊಳಿ
ದೇಶದ ಮೇಲಿನ ಅಭಿಮಾನ, ಪ್ರೀತಿಯಿಂದ ಆಯೋಜನೆ ಮಾಡಲಾಗಿದೆ. ದೇಶ ನಮಗೇನು ನೀಡಿದೇ ಎನ್ನುವ ವಾಕ್ಯವನ್ನು ಅಳಿಸಿ, ದೇಶಕ್ಕೆ ನಾವೇನು ನೀಡುತ್ತೆವೆ ಎಂಬುವುದು ಅರ್ಥಮಾಡಿಕೊಂಡು, ನವಯುವಕರು ದೇಶಕ್ಕೆ ಮಹತ್ವದ ಕೊಡುಗೆ ನೀಡಬೇಕು ಎಂದರು ಹೇಳಿದರು.
ಹೆಬ್ಬಾಳ ಮಾಜಿ ಜಿಪಂ ಸದಸ್ಯ ಮಹಾಂತೇಶ ಮಗದುಮ್ಮ, ಪ್ರಕಾಶ ಬಸ್ಸಾಪೂರಿ, ಕಿರಣ ರಜಪೂತ, ಈರಣ್ಣ ಬಿಸಿರೋಟ್ಟಿ, ಪಪ್ಪುಗೌಡ ಪಾಟೀಲ, ಕುಶಾಲ ಕಾಡಗಿ, ಇಲಿಯಾಸಭೇಗ ಇನಾಮದಾರ, ಸುರೇಶ ಹುದ್ದಾರ, ರಾಝು ಅವಟೆ, ದೇವರಾಜ ಚೌಗಲಾ, ಚಂದರ ನಾಯಿಕ, ರೇವಣ್ಣ ಮಾಳಂಗಿ, ರಾಜು ರೇವನ್ನವರ, ಪ್ರವೀಣ ಅನ್ನೋಜಿ, ಸಂಜು ಗಡರೋಳ್ಳಿ, ಹನಮಂತ ಶೇಖನವರ, ದಯಾನಂದ ಕಮತೆ, ವಿನೋದ ಚೌಗಲಾ, ಶಂಕರ ಆಡಿ, ಪಿಂಟು ಗಿಜವಣಿ ಹಾಗೂ ಇತರರು ಇದ್ದರು.