ಮಾನವ ಬಂಧುತ್ವ ವೇದಿಕೆಯಿಂದ ಹಾಲು- ಹಣ್ಣು ವಿತರಣೆ
ಗೋಕಾಕ: ” ಹಾಲು- ಹಣ್ಣು ಪೌಷ್ಟಿಕಾಂಶಯುಳ್ಳ ಆಹಾರ ಇದನ್ನು ವ್ಯರ್ಥ ಮಾಡದೇ ಬಡ ಮಕ್ಕಳಿಗೆ ನೀಡಿದರೆ ಸಮಾಜಕ್ಕೆ ಒಳಿತು” ಎಂದು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು.
ಮಾನವ ಬಂಧುತ್ವ ವೇದಿಕೆಯಿಂದ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಹಾಲು- ಹಣ್ಣು ವಿತರಿಸುವ ಮೂಲಕ ಬಸವ ಪಂಚಮಿಯನ್ನು ಆಚರಿಸಿ, ಮಾತನಾಡಿದರು,
12ನೇ ಶತಮಾನದಲ್ಲಿಯೇ ಮಹಾಮಾನವತಾವಾದಿ ಬಸವಣ್ಣನವರು ಮೌಢ್ಯತೆಯ ಆಚರಣೆ ಸರಿಯಲ್ಲವೆಂದು ಸಾರಿ, ಸಹಜ, ಸರಳ ಆಚರಣೆಗಳನ್ನು ನೆಲೆಗೊಳಿಸಿದರು.
ಮುಗ್ದ ಜನರನ್ನು ಮೂಢನಂಬಿಕೆ ಶೋಷಣೆಯಿಂದ ಮುಕ್ತಗೊಳಿಸಿದರು. ಅವರು ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಆದರೂ ಇಂದಿಗೂ ಮೂಢ ಆಚರಣೆಗಳು ಮರೆಯಾಗಿಲ್ಲ. ಆದ್ದರಿಂದ ಜನರಲ್ಲಿ ಮೌಢ್ಯತೆ ವಿರುದ್ದ ಜಾಗೃತಿ ಮೂಡಿಸಲು ಪ್ರತಿ ವರ್ಷವೂ ಮಾನವ ಬಂಧುತ್ವ ವೇದಿಕೆಯಿಂದ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಲಕ್ಷಾಂತರ ಬಡ ಮಕ್ಕಳು ಆಹಾರ ಸಿಗದೇ ಸಂಕಷ್ಟ ಪಡುತ್ತಿದ್ದಾರೆ. ಹಸಿದರಿಗೆ ಗೊತ್ತು ಆ ನೋವಿನ ವ್ಯತೆ, ಸಮಾಜ ಸೇವೆ ಮಾಡಲು ಸಾಕಷ್ಟು ದಾರಿಗಳಿವೆ, ಅವುಗಳು ಸಮಾಜದ ಒಳಿತಿಗಾಗಿ ನಡಯಬೇಕು ಎಂದು
ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ
ನಾಡಿನ ಜನತೆಗೆ ಬಸವ ಪಂಚಮಿ ಶುಭಾಶಯಗಳು ಕೋರಿದರು.ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಮಾನವ ಬಂಧುತ್ವ ವೇದಿಕೆ ರಾಜ್ಯಸಂಚಾಲಕರಾದ ರವಿ ನಾಯ್ಕರ್, ಡಾ.ಅನಿತ, ವಿವೇಕ ಜತ್ತಿ, ಎ ಬಿ ಖಾಜಿ, ರಮೇಶ ಕೋಲಕಾರ, ಡಾ. ಮಾಳಗುಡಿ, ಶಾನೂರ ಮೇಸ್ತ್ರಿ, ಸಿದ್ದು ಕುಡೇಕರ್ , ಪ್ರಕಾಶ ತಿಮ್ಮಾಯವರ ಹಾಗೂ ಇತರರು ಇದ್ದರು