ಬೆಳಗಾವಿಯ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದಲ್ಲಿರುವ ವಿವಿಧ ಸಮುದಾಯಗಳಿಗೆ ಸೌಂಡ್ ಸಿಸ್ಟಮ್ ಹಾಗು ಕುರ್ಚಿ ಗಳನ್ನು ವಿತರಿಸಿದ ರಾಹುಲ್ ಜಾರಕಿಹೊಳಿ
ಬೆಳಗಾವಿ: “ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದಕ್ಕಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್‌ನಿಂದ ಘಟಪ್ರಭಾ ಸೇವಾದಳದಲ್ಲಿ ವಿದ್ಯಾರ್ಥಿಗಳಿಗೆ ಆರ್ಮಿ, ಪೊಲೀಸ್ ತರಬೇತಿಯನ್ನು ಉಚಿತ ನೀಡಲಾಗುತ್ತಿದೆ ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿನ ಜಾದವ ನಗರದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಕಚೇರಿಯಲ್ಲಿ ಸತೀಶ ಜಾರಕಿಹೊಳಿ ಫೌಂಢೇಶನ್ ದಿಂದ ಬೆಳಗಾವಿಯ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದಲ್ಲಿರುವ ವಿವಿಧ ಸಮುದಾಯಗಳಿಗೆ ಸೌಂಡ್ ಸಿಸ್ಟಮ್ ಹಾಗು ಕುರ್ಚಿಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿ ಮಾತನಾಡಿದರು.
ಸೌಂಡ್ ಸಿಸ್ಟಮ್‌ವಿತರಣೆ ರಾಜಕೀಯ ಲಾಭಕ್ಕಾಗಿ ಅಲ್ಲ:ಸಮಾಜದ ಬಗ್ಗೆ ಚಿಂತನೆ ಮಾಡುವ ನಾಯಕ ನಮಗೆ ಬೇಕು. ಶೈಕ್ಷಣಿಕ, ರೈತರ ಸಂಕಷ್ಟಗಳಿಗೆ ಸ್ಪಂಧಿಸಿ, ಮಕ್ಕಳಿಗೆ ನವಚೈತನ್ಯ ತುಂಬುವ ನಾಯಕರನ್ನು ಆಯ್ಕೆ ಮಾಡಿದರೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಬದಲಾವಣೆ ಸಾಧ್ಯ, ಲಕ್ಷಾಂತರ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡು ಉದ್ಯೋಗಕ್ಕಾಗಿ- ಕಣ್ಣಿರು ಇಡುತ್ತಿದ್ದಾರೆ. ಅಂತವರಿಗೆ ಬೆಳಕು ನೀಡುವ ಕಾರ್ಯ ಸಮಾಜದಲ್ಲಿ ನಡೆಯಬೇಕು. ನಿತ್ಯವೂ ಒಳ್ಳೆಯ ಕಾರ್ಯಗಳು ನಡೆದಾಗ ಮಾತ್ರ ಸಮಾಜದ ಪ್ರಗತಿ ಕಾಣಬಹುದು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಸಮುದಾಯಗಳಿಗೆ ಸೌಂಡ್ ಸಿಸ್ಟಮ್ ಹಾಗು ಕುರ್ಚಿಗಳನ್ನು ನೀಡಲಾಗುತ್ತಿದೆ. ಇದು ಸಮಾಜ ಸೇವೆಗಾಗಿ , ರಾಜಕೀಯ ಲಾಭಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸತೀಶ ಜಾರಕಿಹೊಳಿ ಫೌಂಢೇಶನ್ ದಿಂದ ಸ್ವಚ್ಛತಾ ಕಾರ್ಯ: ಗ್ರಾಮೀಣ ಪ್ರದೇಶದ ಬಸ್ ನಿಲ್ದಾಣಗಳಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದೆ. ಇವುಗಳನ್ನು ಮನಗಂಡು ಸತೀಶ ಜಾರಕಿಹೊಳಿ ಫೌಂಢೇಶನ್ ದಿಂದ ಸ್ವಚ್ಛತಾ ಕಾರ್ಯ ಮಾಡುವ ಮೂಲಕ, ಸ್ವಚ್ಛತೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಗಳಾಗುತ್ತಿವೆ. ಮೂಲಸೌಕರ್ಯಗಳಿಂದ ಶಾಲೆಗಳು ವಂಚಿತವಾಗಿವೆ, ಅಂತಹ ಶಾಲೆಗಳಿಗೆ ಭೇಟಿ ನೀಡಿ, ಸುಣ್ಣ-ಬಣ್ಣಗಳನ್ನು ಬಳಿದು, ನೂತನ ಸ್ಪರ್ಶ ನೀಡಲಾಗುತ್ತಿದೆ. ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯವಾಗುತ್ತಿದೆ. ಜತೆಗೆ ಸಮುದಾಯ ಭವನಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರೆ, ಬಡವರಿಗೂ ತುಂಬಾ ಅನುಕೂಲವಾಗಲಿದೆ. ಪ್ರತಿ ಸಮಸ್ಯೆಗಳಿಗೂ ಸತೀಶ ಜಾರಕಿಹೊಳಿ ಫೌಂಡೇಶನ್ ಕೈ ಜೋಡಿಸಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಮಲಗೌಡ ಪಾಟೀಲ, ಪ್ರದೀಪ್ ಎಂ ಜೆ , ಪರಶುರಾಮ ಡಗೆ, ನಿವೃತ್ತಿ ಎಸ್ಪಿ ಅಶೋಕ ಸದಲಗೆ , ಕಿರಣ ಪಾಟೀಲ , ಸಲೀಂ ಸನದಿ, ಸಂಜಯ
ದೇಸಾಯಿ, ಸಿದ್ದಿಕ್ ಅಂಕಲಗಿ, ರಿಯಾಜ್ ಕಿಲೇದಾರ ಹಾಗೂ ಇತರರು ಇದ್ದರು.