ನಾಡಿನ ಜನತೆಗೆ ಬಸವ ಪಂಚಮಿ ಹಾರ್ದಿಕ ಶುಭಾಶಯ ಕೋರಿದ ರಾಹುಲ್ ಜಾರಕಿಹೊಳಿ
ಗೋಕಾಕ :” ದೇಶದಲ್ಲಿ ಲಕ್ಷಾಂತರ ಬಡಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದು, ಅಂತಹ ಮಕ್ಕಳನ್ನು ಗುರುತಿಸಿ ಹಾಲು-ಹಣ್ಣು ವಿತರಿಸುವ ಕಾರ್ಯಗಳಾಗಬೇಕು” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ಗೋಕಾಕ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು. ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಇಡೀ ರಾಜ್ಯಾದ್ಯಂತ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಪರಿವರ್ತನೆ ಮಾಡಿ ಆಚರಿಸುತ್ತಿದ್ದೇವೆ. ನಾಡಿನ ಜನತೆಗೆ ಬಸವ ಪಂಚಮಿ ಹಾರ್ದಿಕ ಶುಭಾಶಗಳು, ಆಗಸ್ಟ್ 2ರಂದು ಬೆಳಗಾವಿ, ಗೋಕಾಕ, ಘಟಪ್ರಭಾ, ದುಪದಾಳ ಆಸ್ಪತ್ರೆಯ ಹಾಗೂ ಮಕ್ಕಳಿಗೆ ಹಾಲು-ಹಣ್ಣು ವಿತರಿಸಲಾಗುವುದು.
ಜನರು ಮೂಢನಂಬಿಕೆ, ಮೌಢ್ಯತೆಯಲ್ಲಿಯೇ ಮುಳುಗಿದ್ದಾರೆ. ಬಸವ ಪಂಚಮಿ ನಿಮಿತ್ತ ಬಡಮಕ್ಕಳ ಹಾಲು-ಹಣ್ಣು ನೀಡುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದೆವೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.