ಸವದತ್ತಿ : ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಶ್ರೀ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಕುಸ್ತಿ ಪಂದ್ಯಾವಳಿಯನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಹಾಗೂ ವಿಶ್ವಾಸ ವೈದ್ಯ ಅವರು ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಘಾಟಿಸಿ ಕುಸ್ತಿಯು ನಮ್ಮ ಗ್ರಾಮೀಣ ಕ್ರೀಡೆಯಾಗಿದ್ದು ರಾಜ ಮಹಾರಾಜರು ಪೋಷಣೆ ಮಾಡುತ್ತಿದ್ದರು. ವಿವಿಧ ವಯೋಮಾನದಡಿ ಪ್ರತ್ಯೇಕ ವಿಭಾಗದಲ್ಲಿ ಕುಸ್ತಿಗಳನ್ನು ನಡೆಸುವುದರಿಂದ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಇದರಿಂದ ಕುಸ್ತಿಯನ್ನು ಮತ್ತಷ್ಟು ಜನಪ್ರಿಯಗೊಳಿಸಬಹುದು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕಾಶಪ್ಪ ಗೋವಣ್ಣವರ, ಶೆಟ್ಟೇಪ್ಪ ನಡಕಟ್ಟಿನ, ಕೆ ಜಿ ಗಂಗಲ್, ಈಶ್ವರ್ ಚಲವಾದಿ ಹಾಗೂ ಗ್ರಾಮದ ಸಮಸ್ತ ಗುರು ಹಿರಿಯರು ತಾಯಂದಿರು, ಯುವ ಮಿತ್ರರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA