ಬೆಳಗಾವಿ: ಜುಲೈ 26ರಂದು ಬೆಳಗಾವಿ ತಾಲೂಕಿನ ಕಣಬರ್ಗಿ ರಸ್ತೆಯ ಕಲ್ಯಾಳ ಗ್ರಾಮದ ಬ್ರೀಜ್ ಬಳಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ, ಎಂ. ಮಲ್ಲಾಪುರ, ದಾಸನಟ್ಟಿ ಗ್ರಾಮಗಳ ಏಂಟು ಜನ ಮೃತಪಟ್ಟ ಕುಟುಂಬಸ್ಥರನ್ನು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮುನಿರ್ ಅಹ್ಮದ್ ದೇಸಾಯಿ, ರಾಜಕುಮಾರ ಪಾಟೀಲ್, ಬಸನಗೌಡ ಹೊಳೆಯಾಚೆ, ಪಾಂಡು ಮನ್ನಿಕೇರಿ, ಪಜಲ್ ಮಕಾಂದರ್, ನಿಹಾಲ್ ಹೂಲಿಕಟ್ಟಿ, ಅಲ್ಲಾಖಾನ್ ದೇಸಾಯಿ, ಸಂಜೀವ್ ಮರಿಲಿಂಗನ್ನವರ್, ಗುಂಡಪ್ಪ ಶೆಟ್ಟೇನ್ನವರ್, ಪ್ರವೀಣ ಹರಿಜನ, ಶಿವಾನಂದ ಪಂಗನ್ನವರ್ ಸೇರಿದಂತೆ ಇತರರು ಇದ್ದರು.