ಗೋಕಾಕ : ೩ನೇ ದಕ್ಷಿಣ ವಲಯ ಪೆಂಕಾಕ್ ಸಿಲತ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಶಾಲಾ ಮಕ್ಕಳಿಗೆ ಯುವ ನಾಯಕಿ ಪ್ರೀಯಾಂಕಾ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದರು.
೨೫ ಹಾಗೂ ೨೬ ರಂದು ಶಿವಮೊಗ್ಗದಲ್ಲಿ ನಡೆದ ದಕ್ಷಿಣ ವಲಯ ಪೆಂಕಾಕ್ ಸಿಲತ್ ಕ್ರೀಡಾಕೂಟದಲ್ಲಿ ೧೭ ವರ್ಷದ ಒಳಗಿನ ಗೋಕಾಕದ ಶಾಲಾ ಮಕ್ಕಳಾದ ಕೇದಾರಿ ಜಿದ್ದಿಮನಿ ಪ್ರಥಮ ಸ್ಥಾನ, ಅಭನ್ ಸಾಬ್ ಮುಲ್ಲಾ ದ್ವಿತೀಯ ಸ್ಥಾನ, ಈಶ್ವರ್ ಗಾಣಿಗೇರ್ ದ್ವಿತೀಯ ಸ್ಥಾನ, ಆದರ್ಶ ಮಠದ ದ್ವಿತೀಯ ಸ್ಥಾನ, ರಾಮಚಂದ್ರ ಪಡ್ತಾರೆ ತೃತೀಯ ಸ್ಥಾನ, ಜ್ಯೋತಿಬಾ ಪಡ್ತಾರೆ ತೃತೀಯ ಸ್ಥಾನ, ಜೋಯಾ ಕುರಂದವಾಡ ತೃತೀಯ ಸ್ಥಾನ ,ರಾಹಿಲ ಅಥಣಿ ತೃತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಹೀಗೆ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ನಿಮ್ಮೋಂದಿಗೆ ಸದಾ ಇರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡದ ಜುಬೇರ್ ಮಿರ್ಜಾಬಾಯಿ, ತರಬೇತಿಗಾರರಾದ ದುರ್ಯೋಧನ ಕಡಕೋಳ ಹಾಗೂ ಅನೇಕರು ಉಪಸ್ಥಿತರಿದ್ದರು.