Breaking News

ನಾಟಕ, ಸಂಗೀತ ಇತರ ಕಲೆಗಳಿಗೆ ನಿರಂತರ ಪ್ರೋತ್ಸಾಹಕ್ಕೆ ಬದ್ಧ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ


ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನಡೆದ 13 ದಿನಗಳ ಕಲೆಗಳ ಕಲರವ ಕಾರ್ಯಕ್ರಮದ ಸಮಾರೋಪ ಸಮಾರಂಭ

 

ಬೆಳಗಾವಿ: ನಾಟಕ, ಸಂಗೀತ ಮತ್ತು ಇತರ ಕಲೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಲು ನೂತನ ತರಬೇತಿ ಕೇಂದ್ರವನ್ನು ತೆರೆಯಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ಅಕಾಡೆಮಿಯಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನಡೆದ 13 ದಿನಗಳ ಕಲೆಗಳ ಕಲರವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ಸತೀಶ್ ಶುಗರ್ಸ್ ಅವಾರ್ಡ್ ಅನ್ನು ಈಗಾಗಲೇ ನೀಡಲಾಗುತ್ತಿದೆ. ಇದೀಗ ನಾಟಕ, ಸಂಗೀತ ಮೊದಲಾದ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಲೆಗಳ ಕಲರವ ತರಬೇತಿ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಮತ್ತು ಬಡಕುಟುಂಬದ ಆಸಕ್ತರಿಗೆ ಲಾಭವಾದರೆ ನಮ್ಮ ಶ್ರಮ ಸಾರ್ಥಕವಾದಂತೆ ಎಂದರು.

ಗ್ರಾಮೀಣ, ಬಡ, ದಲಿತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಸೇನೆ, ಪೊಲೀಸ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಐಎಎಸ್, ಕೆಎಎಸ್ ತರಬೇತಿಯನ್ನು ಕೂಡ ನೀಡಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.

13 ದಿನಗಳ ಕಾಲ ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರ ಗಾಯನ ಮತ್ತು ಅಭಿನಯ ನೋಡಿದ ನಂತರ ತರಬೇತಿ ಯಶಸ್ವಿಯಾಗಿದೆ ಎನಿಸುತ್ತದೆ. ಇದೇ ಜುಲೈ 1ರಿಂದ ಹೊಸ ಶಿಬಿರಾರ್ಥಿಗಳಿಗೆ ಕಲೆಗಳ ಕಲರವ ತರಬೇತಿಯನ್ನು ನೀಡಲಾಗುತ್ತದೆ. ಮುಂದೆ ಇನ್ನೆರಡು ತರಬೇತಿ ಮುಗಿದ ನಂತರ ಈಗ ತರಬೇತಿ ಪಡೆದವರನ್ನು ಮತ್ತೊಂದು ಅವಧಿಗೆ ತರಬೇತಿಗೆ ಆಹ್ವಾನಿಸಲಾಗುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ರಂಗಚಟುವಟಿಕೆಯ ತರಗತಿಗಳನ್ನು ನಡೆಸಿದ ನಟ, ನಿರ್ದೇಶಕ ಡಿಂಗ್ರಿ ನರೇಶ್ ಮಾತನಾಡಿ, ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಕಲೆಗಳ ಕಲರವ ಕಾರ್ಯಕ್ರಮ ರಂಗಭೂಮಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಯಾಗಲಿದೆ. ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿರುವ ಸತೀಶ್ ಜಾರಕಿಹೊಳಿಯವರು ಮತ್ತು ಸತೀಶ್ ಜಾರಕಿಹೊಳಿ ಫೌಂಡೇಷನ್ ಕ್ರಮ ಶ್ಲಾಘನೀಯ ಎಂದರು.

ಶಿಬಿರದ ಅವಧಿಯಲ್ಲಿ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ಅಕಾಡೆಮಿಯ ಭದ್ರತಾ ಸಿಬ್ಬಂದಿ ಸೇರಿದಂತೆ ಇನ್ನುಳಿದ ಸಿಬ್ಬಂದಿ ನಮ್ಮೆಲ್ಲರನ್ನೂ ಗೌರವದಿಂದ ನಡೆಸಿಕೊಂಡರು. ಕಿಚನ್ ಸಿಬ್ಬಂದಿ ತಾಯಿಗಿಂತ ಹೆಚ್ಚಿನ ಮಮತೆಯಿಂದ ನಮ್ಮನ್ನು ಕಂಡರು. ಇದಕ್ಕೆಲ್ಲ ಕಾರಣವಾದ ಸತೀಶ್ ಜಾರಕಿಹೊಳಿ ಫೌಂಡೇಷನ್ ಗೆ ಹೃತ್ಪೂರ್ವಕ ಧನ್ಯವಾದಗಳು ಎಂದರು.

ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಮಾತನಾಡಿ, ಸತೀಶ್ ಜಾರಕಿಹೊಳಿ ಫೌಂಡೇಷನ್ ಮತ್ತು ತರಬೇತಿ ಅವಧಿಯ ಅನುಭವಗಳನ್ನು ಹಂಚಿಕೊಂಡರು. ನಟನೆ, ರಂಗಸಜ್ಜಿಕೆ, ಮೇಕಪ್, ಸಂಗೀತ, ಮೇಕಪ್ ಸೇರಿದಂತೆ ಎಲ್ಲ ತರಬೇತಿಯನ್ನು ಕೊಡಲಾಯಿತು. ಊಟ, ವಸತಿ, ವೈದ್ಯಕೀಯ ಸೇವೆ ಸೇರಿದಂತೆ ಎಲ್ಲವನ್ನೂ ಉಚಿತವಾಗಿ ಕೊಡಲಾಯಿತು. ನಮ್ಮನ್ನು ಇಲ್ಲಿ ಮನೆಯವರಿಗಿಂತ ಹೆಚ್ಚಿನದಾಗಿ ನಡೆಸಿಕೊಳ್ಳಲಾಯಿತು. ತರಬೇತಿ ಮುಗಿದ ನಂತರ ಮನೆಗೆ ತೆರಳಲು ಕೂಡ ಮನಸ್ಸಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಸತೀಶ್ ಜಾರಕಿಹೊಳಿ ಫೌಂಡೇಷನ್ ನ ರಿಯಾಚ್ ಚೌಗಲಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಗಸ್ತಿ, ಸಂಗೀತ ಮಾಸ್ತರ್ ವಿಠ್ಠಲ್ ಮೊದಲಾದವರು ಭಾಗವಹಿಸಿದ್ದರು.  

ಸಮಾರೋಪ ಸಮಾರಂಭಕ್ಕೂ ಮುನ್ನ ಶಿಬಿರದಲ್ಲಿ ಸಂಗೀತ ಕಲಿತ ವಿದ್ಯಾರ್ಥಿಗಳು ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅನಂತರ ರಂಗನಾಥ್ ಶಿವಮೊಗ್ಗ ರಚನೆಯ, ಡಿಂಗ್ರಿ ನರೇಶ್ ನಿರ್ದೇಶನದ ಅಹಿಂಸೋ ಪರಮ ಧರ್ಮ ನಾಟಕವನ್ನು ಪ್ರಯೋಗಿಸಲಾಯಿತು. ಮೇಕಪ್, ರಂಗಸಜ್ಜಿಕೆ ಮತ್ತು ಬೆಳಕು ನಿರ್ವಹಣೆಯನ್ನು ಮಧುಸೂದನ್ ನಿರ್ವಹಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಧಾರ್ಮಿಕ ಸಾಮರಸ್ಯದ ಅಗತ್ಯವನ್ನು ಸಾರುವ ನಾಟಕವನ್ನು ಪ್ರಸ್ತುತಪಡಿಸಿದರು.

ಭಾಗವಹಿಸಿದ್ದ ಶಿಬಿರಾರ್ಥಿಗಳು ಧಾರ್ಮಿಕ ಸಾಮರಸ್ಯದ ಅಗತ್ಯವನ್ನು ಸಾರುವ ನಾಟಕವನ್ನು ಪ್ರಸ್ತುತಪಡಿಸಿದರು.

 

 


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ