ವಾರ್ದಾ(ಮಹಾರಾಷ್ಟ): 1936 ರಿಂದ 1948 ರವರೆಗೆ 13 ವರ್ಷಗಳ ಕಾಲ ಗಾಂಧೀಜಿ ವಾಸವಾಗಿದ್ದ ಹಾಗೂ ಸ್ವಾತಂತ್ರ‍್ಯ ಚಳುವಳಿ ಹೋರಾಟದ ಸಮಯದಲ್ಲಿ ಹಲವು ರಾಷ್ಟ್ರೀಯತಾವಾದಿ ನಾಯಕರ ಅಧಿಪತ್ಯ ವಹಿಸಿದ್ದ ಮಹಾರಾಷ್ಟçದ ವಾರ್ಧಾ ಜಿಲ್ಲೆಯಿಂದ ೮ ಕಿ.ಮೀ ದೂರದಲ್ಲಿರುವ ಸುಪ್ರಸಿದ್ಧ ಸೇವಾ ಗ್ರಾಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇಂದು ಭೇಟಿ ನೀಡಿ ಆಶ್ರಮದಲ್ಲಿರುವ ಮಹಾತ್ಮ ಗಾಂಧೀಜಿಗೆ ಸಂಬ0ಧಿಸಿದ ಸಾಕಷ್ಟು ವಸ್ತುಗಳು ಹಾಗೂ ಪ್ರಮುಖ ಗುಡಿಸಲುಗಳು ಮತ್ತು ಕುಟಿರಗಳನ್ನು ವೀಕ್ಷಿಸಿದರು.
ಸೇವಾಗ್ರಾಮ ಆಶ್ರಮ:
1936 ರಿಂದ 1948ರವರೆಗೆ ೧೩ ವರ್ಷಗಳ ಕಾಲ ಗಾಂಧೀಜಿ ವಾಸವಾಗಿದ್ದ ಸ್ಥಳವೆಂದು ಹೆಸರಿಸಲ್ಪಟ್ಟಿದೆ. ಸೇವಾಗ್ರಾಮ ಆಶ್ರಮದಿಂದ ಮಹಾತ್ಮಾ ಗಾಂಧಿಯವರು ೧೯೩೦ ರ ಮಾರ್ಚ್ ೧೨ ರಂದು ದಂಡಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ಸಬರಮತಿ ಆಶ್ರಮದಿಂದ ದಂಡಿಗೆ ತೆರಳುವ ಸಂದರ್ಭದಲ್ಲಿ ಸ್ವಾತಂತ್ರ‍್ಯ ದೊರೆಯದೆ ಸಬರಮತಿಗೆ ಕಾಲಿಡುವುದಿಲ್ಲ ಎಂದಿದ್ದರAತೆ. ಆಗ ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕಿರಲಿಲ್ಲ. ಗಾಂಧೀಜಿಯವರನ್ನು ಬಂಧಿಸಲಾಯಿತು. ಈ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿಗೆ ಸಂಬAಧಿಸಿದ ಸಾಕಷ್ಟು ವಸ್ತುಗಳು ಇವೆ.
ಸೇವಾಗ್ರಾಮ ಸ್ಪೂರ್ತಿದಾಯಕ ಸ್ಥಳವಾಗಿದೆ. ರಾಷ್ಟ್ರೀಯ ವಿಷಯಗಳು ಮತ್ತು ಚಳುವಳಿಗಳ ಮೇಲೆ ಅನೇಕ ನಿರ್ಧಾರಗಳನ್ನು ಸೇವಾಗ್ರಾಮದಲ್ಲಿ ತೆಗೆದುಕೊಳ್ಳಲಾಗಿದೆ. ಈ ದೇಶದ ಸ್ವಾಭಾವಿಕ ಶಕ್ತಿಯನ್ನು ಸರಿಹೊಂದಿಸಲು ಗಾಂಧೀಜಿಯಿಂದ ರೂಪಿಸಲ್ಪಟ್ಟ ರಾಷ್ಟ್ರದ ಅನೇಕ ಚಟುವಟಿಕೆಗಳಿಗೆ ಸಂಬಂಧಿಸಿದ ಹಲವಾರು ಸಂಸ್ಥೆಗಳಿಗೆ ಕೇಂದ್ರ ಸ್ಥಳವಾಯಿತು.
ಸೇವಾಗ್ರಾಮದಲ್ಲಿರುವ ಆಶ್ರಮವು ಇಲ್ಲಿನ ಪ್ರಧಾನ ಆರ‍್ಷಣೆಯಾಗಿದೆ. ಈ ಆಶ್ರಮವು ಗಾಂಧೀಜಿಯವರ ಜೀವನ ಶೈಲಿಗೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದೆ ಎಂದರೂ ತಪ್ಪಾಗಲಾರದು. ಇಲ್ಲಿ ಗಾಂಧೀಜಿಯವರು ತಮ್ಮ ಪತ್ನಿ ಕಸ್ತೂರಬಾ ಅವರೊಂದಿಗೆ ತಂಗಿದ್ದ ಕುಟಿರಗಳಿಗೆ ಇಂದು ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರು ಭೇಟಿ ನೀಡಿ ವೀಕ್ಷಿಸಿದರು.