ಗೌಂಡವಾಡ ಗ್ರಾಮಕ್ಕೆ ಭೇಟಿ-ಗ್ರಾಮಸ್ಥರಲ್ಲಿ ಧೈರ್ಯ ತುಂಬಿದ ಶಾಸಕ ಸತೀಶ್ ಜಾರಕಿಹೊಳಿ
ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನ ಜಮೀನಿಗಾಗಿ ಗ್ರಾಮಸ್ಥರಿಗೆ ಬೆನ್ನೆಲುಬಾಗಿ ನಿಂತಿದ್ದ ಹತ್ಯೆಯಾದ ಸತೀಶ್ ಪಾಟೀಲ್ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾಕಿಹೊಳಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಇದೇ ವೇಳೆ ಸತೀಶ್ ತಾಯಿ ತಮ್ಮ ಅಳಲು ತೋಡಿಕೊಂಡು, ನನ್ನ ಮಗ ಅಮಾಯಕ, ಗ್ರಾಮಸ್ಥರ ಒತ್ತಾಯದ ಮೇರೆಗೆ ದೇವಸ್ಥಾನದ ಜಮೀನಿಗಾಗಿ ಪೈಟ್ ಮಾಡುತ್ತಿದ್ದ, ಇದೇ ವಿಷಯ ಇಟ್ಟುಕೊಂಡು ಮೂರು ಬಾರಿ ಮಗನ ಕೊಲೆಗೆ ಯತ್ನಿಸಿದ್ದರು. ಆದರೆ ಮೊನ್ನೆ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಕಣ್ಣೀರು ಹಾಕಿದರು.
ಪೊಲೀಸರು ಆರೋಪಿಗಳನ್ನು ಬಿಟ್ಟು ಹೆಸರಿಗೆ ಮಾತ್ರ ಹೊರಗಿನ್ನವರನ್ನು ಬಂಧಿಸಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕಲು ಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಪೊಲೀಸರ ಕೈವಾಡವಿದೆ ಎಂದು ಆರೋಪಿಸಿದರು.
ಮೃತ ಸತೀಶ್ ಪಾಟೀಲ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಪೊಲೀಸರ ವೈಫಲ್ಯವೇ ಈ ಘಟನೆಗೆ ಕಾರಣ. ಈ ಮುಂಚೆ ಕೂಡ ಸತೀಶ್ ಪಾಟೀಲ್ ಮೇಲೆ ದಾಳಿ ನಡೆದಿತ್ತು. ಕಾಕತಿ ಪೊಲೀಸ್ ಠಾಣೆಯಲ್ಲಿ ಬಹಳ ವರ್ಷದಿಂದ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ. ಹೀಗಾಗಿ ಜನರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆವಲ 12 ಜನವನ್ನು ಅಷ್ಟೇ ಬಂಧಿಸಿದ್ದಾರೆ. ಈ ಕುರಿತು ಸರಿಯಾದ ತನಿಖೆ ಮಾಡಿ, ಈ ಘಟನೆಗೆ ಯಾರೆಲ್ಲ ಕಾರಣರಾಗಿದ್ದಾರೆ ಅವರನ್ನು ಬಂಧಿಸಬೇಕು. ಇನ್ನೂ ಅಮಾಯಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಗೌಂಡವಾಡ ಗ್ರಾಮಸ್ಥರು ಭಯ ಪಡುವ ಅವಶಕತೆ ಇಲ್ಲ. ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಲಾಗುವುದು. ಸತೀಶ್ ಪಾಟೀಲ್ ಕುಟುಂಬಸ್ಥರಿಗೆ ನ್ಯಾಯ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಪ್ರದೀಪ್ ಎಂ.ಜೆ., ಮಲಗೌಡ ಪಾಟೀಲ್ , ಪೂಜಾ ಸತೀಶ್ ಪಾಟೀಲ, ನಲಿನಿ ಪಾಟೀಲ, ಸುಮ್ಮಣ ಪಾಟೀಲ, ಗಂಗಾ ರಾಮ ಪಾಟೀಲ ಹಾಗೂ ಗ್ರಾಮಸ್ಥರು ಇದ್ದರು.