ಗೋಕಾಕ: ಕಡು ಬಡತನದಲ್ಲಿರುವ ಓರ್ವ ವ್ಯಕ್ತಿಯೊಬ್ಬನಿಗೆ ಉಚಿತವಾಗಿ ಮೂಳೆ ಶಸ್ತ್ರಚಿಕಿತ್ಸೆ ಮಾಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು.. ಕಡು ಬಡತನದಲ್ಲಿರುವ ಗೋಕಾಕ ತಾಲೂಕಿನ ಕುಂದರಿಗಿ ಗ್ರಾಮದ ಲಕ್ಷ್ಮಣ ಪೂಜೇರಿ ಅವರ ಮೂಳೆ ಮುರಿತದಿಂದ ತಮ್ಮ ಜೀವನದ ಬಂಡಿ ಮುಂದುಡಲು ಸಾಧ್ಯವಾಗದೇ ತೆರಳುತ್ತಾ ಸಾಗುವಂತಾಗಿತ್ತು. ಅವರ ಸಮಸ್ಯೆಗೆ ಸ್ಪಂದಿಸುವಂತೆ ಅನೇಕ ನಾಯಕರಿಗೆ ಮಾಹಿತಿ ತಿಳಿಸಿದರೂ ಯಾರು ಇವರತ್ತ ನೋಡಲಿಲ್ಲ. ಕೊನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಾಗ ಇವರ ಸಮಸ್ಯೆ ಮನಗೊಂಡ ಶಾಸಕ ಸತೀಶ ಜಾರಕಿಹೊಳಿ ಅವರು ಕೂಡಲೇ ಅವರ ಆಪ್ತ ಸಹಾಯಕ ಫಜಲ್ ಮಕಾಂದಾರ ಅವರಿಗೆ ತ್ವರಿತವಾಗಿ ಉಚಿತವಾಗಿ ಮೂಳೆ ಶಸ್ತ್ರಚಿಕಿತ್ಸೆ ಮಾಡುವಂತೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಲಕ್ಷ್ಮಣ ಪೂಜೇರಿ ಅವರ ಮೂಳೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಮೊದಲಿನ ರೀತಿಯಲ್ಲಿ ನಡೆದಾಡುತ್ತಿದ್ದಾರೆ. ಕಷ್ಟದಲ್ಲಿರುವ ವ್ಯಕ್ತಿಯ ಸಹಾಯಕ್ಕೆ ಮಿಡಿದ ಸಾಹುಕಾರನ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಕಡು ಬಡವನ ಕಷ್ಟಕ್ಕೆ ನೇರವಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಗೆ ನಗರದ ಹಿಲ್ ಗಾರ್ಡನಲ್ಲಿ ಕುಂದರಗಿ ಗ್ರಾಮಸ್ಥರು ಹಾಗೂ ಹಾಗೂ ಉಚಿತ ಮೂಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಲಕ್ಷ್ಮಣ ಪೂಜೇರಿ ಅವರು ಸನ್ಮಾನಿಸಿದರು.
ಈ ವೇಳೆ ಕುಂದರಗಿ ಗ್ರಾಮದ ಉಚಿತವಾಗಿ ಮೂಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಲಕ್ಷ್ಮಣ ದೊಡ್ಡಈರಪ್ಪಾ ಪೂಜೇರಿ ಮಾತನಾಡಿ, ನನಗೆ ಮೋಳೆ ಸಮಸ್ಯೆಯಿಂದ ಸಾಕಷ್ಟು ತೊಂದರೆ ಉಂಟಾಗಿತ್ತು. ಈ ಸಮಸ್ಯೆ ಬಗೆಹರಿಸಲು ಅನೇಕ ಆಸ್ಪತ್ರೆಗಳಿಗೆ ತೆರಳಿದಾಗ ಈ ಚಿಕಿತ್ಸೆಗೆ ಅಪಾರ ಪ್ರಮಾಣದ ಹಣ ಖರ್ಚಾಗುವುದು ಎಂದು ತಿಳಿ ಹೇಳಿದಾಗ ಒಂದು ಕ್ಷಣ ತಬ್ಬಿಬ್ಬಾಗಿ ಹೋದೆ. ಇಷ್ಟೊಂದು ಹಣ ಕೂಡಿಸುವದಾದರೂ ಹೇಗೆ? ಎಂಬ ಚಿಂತೆ ನನ್ನನ್ನು ಕಾಡಲಾರಂಬಿಸಿತು. ಕೊನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ನನ್ನ ಸಮಸ್ಯೆ ಕುರಿತು ಮನವಿ ಮಾಡಿಕೊಂಡಾಗ ಅವರು ತ್ವರಿತವಾಗಿ ನನ್ನ ಮೂಳೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿ ನನ್ನ ಜೀವನದ ಬಂಡಿಯನ್ನು ಮುಂದುಡುವಂತೆ ಮಾಡಿದ್ದಾರೆ. ಅವರ ಈ ಸಾಮಾಜಿಕ ಕಾರ್ಯ ನಾ ಎಂದು ಮರೆನು ಎಂದರು.
ಈ ವೇಳೆ ಕುಂದರಗಿ ಗ್ರಾಪಂ ಮಾಜಿ ಸದಸ್ಯಅಪ್ಪಯ್ಯ ಮಲ್ಲಣ್ಣವರ, ಕಾಂಗ್ರೆಸ್ ಮುಖಂಡ ಅಲ್ಲಾಖಾನ ಅರಳಿಕಟ್ಟಿ, ಬಸವರಾಜ ಪೂಜಾರಿ ಫಜಲ್ ಮಕಾಂದಾರ ಸೇರಿದಂತೆ ಕುಂದರಗಿ ಗ್ರಾಮಸ್ಥರು ಇದ್ದರು.