ಗೋಕಾಕ: ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಶಿವಾ ಫೌಂಡೇಶನ್ ಮಕ್ಕಳಿಗೆ ಕರಾಟೆ ತರಬೇತಿ, ಪ್ರೋತ್ಸಾಹ ನೀಡಿದರು, ಮಕ್ಕಳಿಗೆ ಅವಕಾಶ ಕಲ್ಪಿಸುವ ಮೂಲಕ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022 ದಲ್ಲಿ ವಿಧ್ಯಾರ್ಥಿಗಳು ಸಾಧನೆ ಮಾಡಿದರು.
ಹರಿಯಾಣದಲ್ಲಿ ನಡೆದ ಯೂತ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022 ದಲ್ಲಿ ಶಿವಾ ಫೌಂಡೇಶನ್ ಮಕ್ಕಳು ವಿಜೇತರಾಗಿ ಸಾಧನೆ ಮಾಡಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಸತತ ಏಳು ತಿಂಗಳಿನಿಂದ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಶಿವಾ ಫೌಂಡೇಶನ್ ಮಕ್ಕಳಿಗೆ ಉಚಿತ ಕರಾಟೆ ತರಬೇತಿ ನೀಡಿ ಸದೃಢಗೋಳಿಸಿದರು. ಶಿವಾ ಫೌಂಡೇಶನ್ ಮಕ್ಕಳಾದ ಬಾಳಪ್ಪಾ ಬಡಿಗೇರ, ದುರ್ಗಪ್ಪಾ ಜಾರಕಿಹೊಳಿ, ಇಬ್ಬರು ಬಂಗಾರದ ಪದಕ, ಸಾಗರ್ ಕರೆಕ, ಶ್ವೇತಾ ಹಿರೇಮಠ ಇಬ್ಬರು ವಿದ್ಯಾರ್ಥಿಗಳು ಬೆಳ್ಳಿಯ ಪದಕ ಗಳಿಸಿದ್ದಾರೆ.ಈ ವಿಧ್ಯಾರ್ಥಿಗಳಿಗೆ ತರಬೇತಿ ನೀಡಿದ ಸತೀಶ್ ಜಾರಕಿಹೊಳಿ ಫೌಂಡೇಶನ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಈ ಸಮಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ವಿಜೇತರಾದ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಿ, ಇನ್ನೂ ಹೆಚ್ಚಿನ ಸಾಧನೆ ಮಾಡಿ ನಿಮ್ಮ ಜೊತೆಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡದ ಜುಬೇರ್ ಮಿರ್ಜಾಬಾಯಿ, ತರಬೇತಿಗಾರ ದುರ್ಯೋಧನ ಕಡಕೋಳ, ಮಹೇಶ ಜೊತೆಣ್ಣವರ, ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡದವರು ಉಪಸ್ಥಿತರಿದ್ದರು.