ಯಮಕನಮರಡಿ: ಇಂದಿನ ವಿದ್ಯಾರ್ಥಿಗಳು ತಮ್ಮ ಮುಂದಿರುವ ಸವಾಲಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಲು ಮುಂದಾಗಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಎನ್.ಎಸ್. ಎಫ್. ಪ್ರಾಥಮಿಕ ಶಾಲೆ ಯಮಕನಮರಡಿ ಹಾಗೂ ಹತ್ತರಗಿ, ಆನಂದಪೂರ ಪ್ರೌಢಶಾಲೆಯ 2021-2022ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನ ಹಾಗೂ ಸೇವಾ ನಿವೃತ್ತಿ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡದೇ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಿ ಕಲಿತ ಶಾಲೆ ಹಾಗೂ ಪಾಲಕರ ಹೆಸರು ಆಕಾಶಕ್ಕೆತ್ತರಕ್ಕೆ ಕೊಂಡೊಯ್ಯಲು ಮುಂದಾಗಬೇಕು. ಎಂದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆನಂದಪೂರ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೂ ಸೈ ಕ್ರೀಡಿಗೂ ಜೈ ಎಂಬಂತೆ ಸಿದ್ದಗೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆ ಹೆಸರು ದೇಶ ಹಾಗೂ ರಾಜ್ಯದಲ್ಲಿ ಆಕಾಶಕ್ಕೆತರಕ್ಕೆ ಎರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಮ್ಮ ವಿಶ್ವಾಸ ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವರ್ಷಾ ಝೂಟಿ, ಸಾಕ್ಷಿ ಹಿರೇಮಠ, ಅರಂಧತಿ ಕಾಂಬಳೆ ವಿದ್ಯಾರ್ಥಿಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಸನ್ಮಾನಿಸಿದರು. ಈ ಮೂವರು ವಿದ್ಯಾರ್ಥಿಗಳಿಗೆ ಗ್ರಾಮದ ಹಿರಿಯರಾದ ಬಸವಣ್ಣಪ್ಪಾ ಪಾಟೀಲ ಒಟ್ಟು 10 ಸಾವಿರ ರೂ . ನಗದು ಬಹುಮಾನವನ್ನು ವಿತರಿಸಿದರು. ಇದೇ ವೇಳೆ ಸೇವಾ ನಿವೃತ್ತಿಯಾದ ಸುರೇಶ ದುಂಡಪ್ಪ ಬಸ್ಸಾಪುರ ಅವರನ್ನು ವೇದಿಕೆ ಮೇಲಿದ್ದ ಗಣ್ಯರು ಸನ್ಮಾನಿಸಿ ಬಿಳ್ಕೋಟ್ಟರು. ಕೊನೆಗೆ ಶಾಲೆ ಮಂಡಳಿ ವತಿಯಿಂದ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನ ಮಾಡಲಾಯಿತು.
ಈ ವೇಳೆ ಬಸಪ್ಪ ಪಾಟೀಲ, ರವೀಂದ್ರ ಜಿಂದ್ರಾಳಿ, ಶಶಿಕಾಂತ ಹಟ್ಟಿ ಸೇರಿದಂತೆ ಶಾಲೆ ಸಿಬ್ಬಂದಿಗಳು ಇದ್ದರು.