ಗೋಕಾಕ: “ಸಂಚಾರ ದಟ್ಟನೆ ಹಾಗೂ ಕೈಂ ಗಳನ್ನು ನಿಯಂತ್ರಿಸಲು ನಗರ ವ್ಯಾಪ್ತಿಯಲ್ಲಿ “ಸಿಸಿ ಕ್ಯಾಮೆರಾ” ಗಳನ್ನು ಶೀಘ್ರವೇ ಅಳವಡಿಸಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿನ ಗಾರ್ಡನ್ ಕಚೇರಿಯಲ್ಲಿ ಶನಿವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಯಾಮೆರಾ ಇಲ್ಲದರಿಂದ ಅಪರಾಧ ಹಾಗೂ ವಾಹನ ಅಪಘಾತಗಳು ಹೆಚ್ಚಾಗುತ್ತಿವೆ. ಶೀಘ್ರವೇ ಪೊಲೀಸ್ ಇಲಾಖೆ ಸೂಕ್ಷ್ಮ ಪ್ರದೇಶಗಳಿಗೆ ಹಾಗೂ ನಗರಾದ್ಯಂತ “ಸಿಸಿ ಕ್ಯಾಮೆರಾ” ಅಳವಡಿಸಿ, ಜನರ ಹಿತರಕ್ಷಣೆಗೆ ಮುಂದಾಗಬೇಕು ಒತ್ತಾಯಿಸಿದರು.
ಎಚ್ಚೆತ್ತುಕೊಳ್ಳದ “ಖಾಕಿ ಪಡೆ”
ಈಗಾಗಲೇ ಇಲಾಖೆ ಗಮನಕ್ಕೆ ತರಲಾಗಿದೆ ಆದರೂ, ಅಧಿಕಾರಿಗಳು ಎಚ್ಚೆತ್ತು ಕೊಂಡಿಲ್ಲ. ಪೊಲೀಸ್ ಅಧಿಕಾರಿಗಳು ಮುಚ್ಚಿರುವ ಕಣ್ಣುಗಳನ್ನು ತೆರೆದು, ಬಂದಾಗಿರುವ “ಸಿಸಿ ಕ್ಯಾಮೆರಾ” ಗಳ ಕಣ್ಣನ್ನು ತೆರೆಯಲು ಮುಂದಾಗಬೇಕು ಎಂದು ಪೊಲೀಸ್ ಇಲಾಖೆ ವಿರುದ್ದ ಅಸಮಾಧಾನ ಹೋರಹಾಕಿದರು.
ನಾವು ಕೂಡಾ ಸಕ್ಕರೆ ಕಾರ್ಖಾನೆ ಹಾಗೂ ಸೇವಾದಳ ಸೇರಿದಂತೆ ವಿವಿಧೆಡೆ “ಸಿಸಿ ಕ್ಯಾಮೆರಾ”ಗಳನ್ನು ಅಳವಡಿಸಿ ಯಾವುದೇ ದುರ್ಘಟನೆ ನಡೆಯಂತೆ ಕ್ರಮ ಕೈಗೊಂಡಿದ್ದೆವೆ. ಅದರಂತೆ ಪೊಲೀಸ್ ಇಲಾಖೆಯೂ ಜನರ ಹಿತದೃಷ್ಟಿಯಿಂದ ಸೂಕ್ಷ್ಮ ಸ್ಥಳಗಳಲ್ಲಿ “ಸಿಸಿ ಕ್ಯಾಮೆರಾ” ಅಳವಡಿಸಬೇಕು ಎಂದು ಒತ್ತಾಯ ಹೇರಿದರು.
ಎರಡರಲ್ಲೂ ಗೆಲುವು ನಮ್ಮದೇ
ಎಲ್ಲಾ ಪಕ್ಷಗಳನ್ನು ತುರುಸಿನಿಂದ ಪ್ರಚಾರ ಮಾಡುತ್ತಿವೆ. ಅದರಂತೆ ನಾವು ತಮ್ಮ ಪಕ್ಷದಿಂದ ಬೆಳಗಾವಿ, ವಿಜಯಪುರ, ಬಾಗಲಕೋಟ ಹಾಗೂ ಚಿಕ್ಕೋಡಿಯಲ್ಲೂ ಸಹ ಬಿರುಸಿನ ಪ್ರಚಾರ ಕೈಗೊಂಡಿದ್ದೆವೆ. ಅಂತಿಮವಾಗಿ ಶಿಕ್ಷಕರ ಹಾಗೂ ಪದವೀಧರ ಮಾಡುವಂತ ಮತದಾನದ ಮೇಲೆ ಫಲಿತಾಂಶ ನಿಂತಿದೆ. ಎರಡರಲ್ಲೂ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.