ಕುಂದಗೋಳದಲ್ಲಿ 31 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬಾಗಿಯಾದ ಸತೀಶ ಜಾರಕಿಹೊಳಿ
ಕುಂದಗೋಳ: “ಭಾರತೀಯ ಸಂಸ್ಕೃತಿಗೆ ತನ್ನದೇಯಾದ ಇತಿಹಾಸವಿದೆ. ವಿವಾಹಗಳು ಆ ಸಂಪ್ರದಾಯದಂತೆ ನಡೆಯುವುದು ಇಂದಿಗೂ ರೂಡಿಯಲ್ಲಿದೆ. ಎಲ್ಲಾ ಧರ್ಮಗಳು ಒಗ್ಗೂಡಿಕೊಂಡಾಗ ಮಾತ್ರ ಸಂಪ್ರದಾಯ, ಸಂಸ್ಕೃತಿಗೆ ಮೆರಗು ಬರುತ್ತದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.
ದಿ. ಶ್ರೀ ಗೋವಿಂದಪ್ಪ ಹ. ಜುಟ್ಟಲ ಇವರ ಸ್ಮರಣಾರ್ಥ ನಿಮಿತ್ತವಾಗಿ ಭಾನುವಾರ ಕುಂದಗೋಳದಲ್ಲಿ ಜುಟ್ಟಲ ಪ್ರತಿಷ್ಠಾನ ಮತ್ತು ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ 31 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
“ಹೆಚ್ಚು ಹೆಚ್ಚು ಸಾಮೂಹಿಕ ವಿವಾಹಗಳನ್ನು ನಡೆಸುವುದರಿಂದ ಸಮಾಜವನ್ನು ಆರ್ಥಿಕವಾಗಿ ಆರೋಗ್ಯಕರವಾಗಿ ಪ್ರಗತಿಪತದಂತೆ ಕಂಡ್ಯೊಯಲು ಸಾಧ್ಯವಾಗುತ್ತದೆ. ಹಾಗಾಗಿ ಜನರು ಈ ದಿಶೇಯಲ್ಲಿ ಚಿಂತನೆ ಮಾಡುವ ಅಗತ್ಯವಿದ ಎಂದು ಅವರು ಹೇಳಿದರು.
ಹಿರಿಯರ ಆಶೀರ್ವಾದೊಂದಿಗೆ ಸಾಮೂಹಿಕ ವಿವಾಹ ಅತೀ ಸರಳವಾಗಿ ಆಯೋಜಿಸಲಾಗಿದೆ. ಇಂತಹ ಕಾರ್ಯಗಳು ನಿರಂತರವಾಗಿ ಸಮಾಜದಲ್ಲಿ ನಡೆಯಬೇಕು. ಹಿಂದುಳಿದ ಬಡವರಿಗೆ ಸಾಮೂಹಿಕ ವಿವಾಹದಿಂದ ತುಂಬಾ ಅನುಕೂಲವಾಗುತ್ತದೆ. ಎನ್‌ಜಿಓ ಹಾಗೂ ಈ ಭಾಗದ ಗಣ್ಯರ ನೇತೃತ್ವದಲ್ಲಿ ವಿವಾಹ ಕಾರ್ಯವಾಗುತ್ತಿದೆ. ಸಾಮಾಜಿಕ ಕೆಲಸಕ್ಕಾಗಿ ಎಲ್ಲರೂ ಸಹಕಾರ ನೀಡದರೆ ಒಳ್ಳೆಯ ಕಾರ್ಯಗಳನ್ನು ಸಮಾಜದಲ್ಲಿ ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಕುಸಮ್ಮಾ ಶಿವಳ್ಳಿ, ಚಂದ್ರಶೇಖರ ಜುಟ್ಟಲ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನೀಲ ಕುಮಾರ ಪಾಟೀಲ, ಕಾಂಗ್ರೆಸ್ ಮುಂಖಡ ಅರವಿಂಧ ಕಟ್ಟಗಿ, ಶಾಂತಮ್ಮಾ ಗುಜ್ಜಳ, ಮಾಜಿ ಶಾಸಕ ಎಂ ಎಸ್ ಅಕ್ಕಿ, ಟಿ ಕೆ ನಿರ್ಲಕಟ್ಟಿ, ಚಂದ್ರಣ್ಣ ಬೇಡರ, ಮುಕ್ತಿಮಠದ ಶ್ರೀ ಗಳು , ಪ್ರಕಾಶ ಹಾದಿಮನಿ, ಡಾ. ಮಯೂರ ಮೋರೆ, ಜಿ ಟಿ ಗೋರ್ಪಡೆ, ಸುರೇಶ ಸವಣೂರ, ಸೋಮಣ್ಣ ಬೇವಿನಮರದ, ಅಲ್ತಾಪ್ ಹಳ್ಳೂರ ಹಾಗೂ ಇತರರು ಇದ್ದರು.