ಹುಕ್ಕೇರಿ: ” ಶಾಂತಿ ಮತ್ತು ಪ್ರೀತಿಯೇ ಬುದ್ಧ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆ ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಕೊಟಬಾಗಿ ಸಮುದಾಯ ಭವನದಲ್ಲಿ ಬುದ್ಧ ಜಯಂತಿ ನಿಮಿತ್ತವಾಗಿ ಆಯೋಜಿಸಲಾಗಿದ್ದ, ಬುದ್ಧ, ಬಸವ ಹಾಗೂ ಅಂಬೇಡ್ಕರ ಅವರ ವಿಚಾರ ಗೋಷ್ಠಿಯಲ್ಲಿ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಎಲ್ಲರೂ ಪ್ರೀತಿಯಿಂದ, ಸಹಬಾಳ್ವೆಯಿಂದ ಬದುಕಿದಾಗ ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯ. ಬುದ್ಧ ಬೋಧಿಸಿದ ಬೌದ್ಧ ಧರ್ಮವೂ ಬುದ್ಧನ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬುದ್ಧನ ಶಾಂತಿ, ಬಸವಣ್ಣನ ಸಮಾನತೆ, ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ನಾವು ಸಾರಿ ಸಾರಿ ಹೇಳಬೇಕಾಗಿದೆ. ಆದರ್ಶವ್ಯಕ್ತಿಗಳ ದಿನವನ್ನು ಆಚರಿಸುವ ಜೊತೆಗೆ ಅವರು ಮಾದರಿ ಬದುಕನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ದಿವ್ಯ ಸಾನಿದ್ಯ ವಹಿಸಿದ ಶ್ರೀ ಬ್ರಹ್ಮಾನಂದ ಅಜ್ಜನವರು , ಕಲ್ಮಂಠ ಶ್ರೀ ಪ್ರಭುದೇವರು , ಅಧ್ಯಕ್ಷತೆ ಸುರೇಶ ತಳವಾರ, ರಮೇಶ ಹುಂಜಿ, ಉಮೇಶ ಸಿದ್ನಾಳ, ಮಹ್ಮದ ತಹಸೀಲ್ದಾರ, ವಿಜಯ ಮೇಳವಂಕಿ ಗ್ರಾಮಸ್ಥರಾದ, ಮಾರುತಿ ಚಿಕ್ಕೋಡಿ, ಪ್ರಜ್ವಲ ದಾವೆಪ್ಪಗೋಳ, ಬಾಳವಂತ ಮಂತ್ರಿ, ಕೆಂಪಣ್ಣಾ ಬೆಳವಿ, ಬಸವರಾ ತಳವಾರ, ಅಮೀತ ದಾಸಪ್ಪಗೋಳ, ಗಂಗಾರಾಮ ಹತ್ತರಗಿ, ರಾಕೇಶ ತಳವಾರ, ರಮೇಶ ಖಾತೇವಾರ, ತುಷಾರ ಕಟ್ಟಿ, ಶಾನೂರ ಮಂತ್ರಿ, ಈರಪ್ಪಾ ಹತ್ತರಗಿ, ಮುತ್ತಪ್ಪಾ ತಳವಾರ, ಶಶಿಕಾಂತ ಕಾಂಬಳೆ, ಶಿವಾನಂದ ಸುಲಿಮನಿ, ಶೇಖರ ಹತ್ತರಗಿ ಹಾಗೂ ಇತರರು ಇದ್ದರು. ʼ