ದೇವಗಿರಿಯಲ್ಲಿ ಕಣ್ಮನ ಸೆಳೆದ ಸುಮಂಗಲಿಯರ ಕುಂಭಮೇಳ
ಬೆಳಗಾವಿ: ತಾಲೂಕಿನ ದೇವಗಿರಿ ಗ್ರಾಮದ ಶ್ರೀ ಮಹಾಲಕ್ಷ್ಮಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಶನಿವಾರ ನಡೆಯಿತು.
ಮುಕ್ತಿಮಠ ಶ್ರೀ ಶಿವಸಿದ್ಧ ಸೋಮೇಶ್ವರ ಸ್ವಾಮಿಜೀ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನೆರವೇರಿಸಿದರು.
ದೇವಗಿರಿಯಲ್ಲಿ ಜಗನ್ಮಾತೆ ಮಹಾಲಕ್ಷ್ಮಿ ದೇವಿಯ ನೂತನ ಕಟ್ಟಡ ನೆರವೇರಿಸಿ ಶಿವಸಿದ್ಧ ಸೋಮೇಶ್ವರ ಶ್ರೀಗಳಿಂದ ಆಶೀರ್ವಾದ ಪಡೆದರು. ಬಳಿಕ ಶ್ರೀಗಳು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರಿಗೆ ಗೌರವಿಸಿ ಸನ್ಮಾನಿಸಿದರು.
ದೇವಗಿರಿಯಲ್ಲಿ ಕಣ್ಮನ ಸೆಳೆದ ಸುಮಂಗಲಿಯರ ಕುಂಭಮೇಳ
ತಾಲೂಕಿನ ದೇವಗಿರಿ ಗ್ರಾಮದ ಶ್ರೀ ಮಹಾಲಕ್ಷ್ಮಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ನಿಮಿತ್ತವಾಗಿ ಹಮ್ಮಿಕೊಂಡ ಕುಂಭಮೇಳದಲ್ಲಿ 1008 ಕ್ಕೂ ಹೆಚ್ಚು ಸುಮಂಗಲಿಯರು ಕುಂಭಮೇಳದಲ್ಲಿ ಪಾಲ್ಗೊಂಡು ಗಮನಸೆಳೆದರು.
ದೇವಗಿರಿ ಗ್ರಾಮದ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, 1008 ಮುತೈದೆಯರ ಬೃಹತ್ ಕುಂಬಮೇಳ ಹಾಗೂ ಮೇಳೈಸಿದ ವಾದ್ಯಮೇಳ ಭಕ್ತಾದಿಗಳ ಕಣ್ಮನ ಸೆಳೆದವು.
ದೇವಗಿರಿ ಗ್ರಾಮದ ದ್ವಾರಬಾಗಿಲಿನಿಂದ ಪ್ರಾರಂಭವಾದ ಕುಂಭಮೇಳ ವಿವಿಧ ಕಲಾ ತಂಡಗಳಾದ ಕರಡಿ ಮಜಲು, ಸುಮಂಗಲೆಯರ ಹೆಜ್ಜೆ ಕುಣಿತ, ಶ್ರೀಗಳಿಗೆ ಪುಷ್ಪರ್ಚನೆ, ನಂದಿಕೋಲು, ಡೊಳ್ಳು ಕುಣಿತ, ಸೇರಿದಂತೆ ನಾನಾ ಕಲಾ ತಂಡಗಳ ನೃತ್ಯ ಸಾರ್ವಜನಿಕರ ಮನತಣಿಸಿತು.
ಈ ಸಂದರ್ಭದಲ್ಲಿವಿರಕ್ತಮಠ ಶ್ರೀ ಬಸವಲಿಂಗ ಸ್ವಾಮಿಜೀ , ಶಿವಪೂಜಿಮಠ ಸ್ವಾಮಿಗಳು, ಸದಾಶಿವಯ್ಯಾ ಹಿರೇಮಠ ಸ್ವಾಮಿಜೀ, ಮಣ್ಣಿಕೇರಿ ಶರಣಯ್ಯಾ ಸ್ವಾಮಿಜೀ, ಮಲ್ಲಗೌಡ ಪಾಟೀಲ, ಗ್ರಾ ಪ. ಅಧ್ಯಕ್ಷೇ ಶ್ರೀದೇವಿ ಪಾಟೀಲ, ಬಸಪ್ಪಾ ಪಾಟೀಲ ಹಾಗೂ ಇತರರು ಇದ್ದರು.