ಗೋಕಾಕ: ವಚನ ಸಾಹಿತ್ಯಕ್ಕೆ ಸರಿಸಾಟಿಯಾಗಿರುವ ಸಾಹಿತ್ಯ ಪ್ರಪಂಚದಲ್ಲಿ ಮತ್ತೊಂದು ಇಲ್ಲ. ಎಲ್ಲಿಯೂ ಕೂಡ ಸಿಗುವುದಿಲ್ಲ ಎಂದು ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.
ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ವಿಶ್ವ ಗುರು ಬಸವೇಶ್ವರರ ಜಯಂತಿ ನಿಮಿತ್ತ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಆಡು ಭಾಷೆಯಲ್ಲಿರುವ ವಚನಗಳು ಜನರಿಗೆ ಸರಳವಾಗಿ ಅರ್ಥವಾಗತ್ತವೆ. ಸಮಾಜದಲ್ಲಿ ಬದಲಾವಣೆಗೆ ಮಹತ್ವದ ಪಾತ್ರ ವಹಿಸುವ ‘ವಚನ ಸಾಹಿತ್ಯ ಶ್ರೇಷ್ಠತೆಯ ವಿಚಾರಗಳಿಂದ ಕೂಡಿದೆ’ ಎಂದರು.
ಜೀವನದ ಬದಲಾವಣೆಗೆ ವಚನಗಳು ಸ್ಪೂರ್ತಿಯಾಗಿ ಕೆಲಸ ಮಾಡುತ್ತವೆ. ಬಸವಣ್ಣವರು ವಿಶ್ವಗುರು ಅನಿಸಿಕೊಂಡಿದ್ದಾರೆ. ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ವಚನಗಳ ಮೂಲಕವೇ ಹೋಗಲಾಡಿಸಿದ್ದಾರೆ. ಎಲ್ಲರಿಗೂ ಸಮಾನವಾಗಿ ನೋಡಿಕೊಂಡ, ಅವರು ಸಮಾನತೆಯ ಹರಿಕಾರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವೀವಕ ಜತ್ತಿ, ಪಾಂಡು ಮನ್ನಿಕೇರಿ, ವಿಠ್ಠಲ ಪರಸನ್ನವರ, ಅರವಿಂದ ಕಾರಚಿ, ಮಾರುತಿ ಗುಟಗುದ್ದಿ, ಪಾಂಡು ರಂಗಸುಭೆ, ಮಂಜೂಳಾ ರಾಮಗಾನಟ್ಟಿ ಸೇರಿದಂತೆ 100ಕ್ಕೂ ಹೆಚ್ಚು ಜನ ಮುಖಂಡರು ಇದ್ದರು.