ಬೆಳಗಾವಿ: ಆಪ್ತ ಸಹಾಯಕ ಫಜಲ್ ಮಕಾಂದಾರ ಅವರ ತಾಯಿ ರಿಯಾನಾ ಶೌಕತ್ ಮಕಾಂದಾರ ನಿಧನರಾದ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪಾಶ್ಚಾಪೂರ ಗ್ರಾಮಕ್ಕೆ ಭೇಟಿ ನೀಡಿ, ಮೃತ ರಿಯಾನಾ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಲವು ಮುಖಂಡರು ಇದ್ದರು.
