ಯಮಕನಮರಡಿ ಮತಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕ ಸತೀಶ ಜಾರಕಿಹೊಳಿರನ್ನುಕೊಂಡಾಡಿರುವ ಮಾಜಿ ಜಿಪಂ ಸದಸ್ಯರ ಮನದಾಳದ ಮಾತುಗಳು ಇಲ್ಲಿವೆ.
ಯಮಕನಮರಡಿ: ವಿದ್ಯಾರ್ಥಿಗಳ ಹಾಗೂ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ಪಾಶ್ಚಾಪೂರದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಮಾರ್ಕೇಂಡೆಯ ನದಿ ಅಡ್ಡಲಾಗಿ ಬೃಹತ್ ಸೇತುವೆ ನಿರ್ಮಾಣ ಮಾಡಿದ್ದಾರೆ. ಈ ಭಾಗದ ಬಹುದಿನಗಳ ಕನಸನ್ನು ಶಾಸಕ ಸತೀಶ ಜಾರಕಿಹೊಳಿ ಅವರು ನನಸು ಮಾಡಿದ್ದಾರೆ ಎಂದು ಮಾಜಿ ಜಿಪಂ ಸದಸ್ಯ ಮಂಜುನಾಥ ಪಾಟೀಲ ಹೇಳಿದರು.
ಯಮಕನಮರಡಿ ಅಭಿವೃದ್ಧಿ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಯಮಕನಮರಡಿ ಮತಕ್ಷೇತ್ರದಿಂದ ಆಯ್ಕೆಯಾದ ಬಳಿಕ, 2009 ರಿಂದ ಇಲ್ಲಿವರೆಗೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಜತೆ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಈ ಸೇತುವೆ ನಿರ್ಮಾಣದಿಂದ ರೈತರಿಗೆ ಬಹಳ ಅನುಕೂಲವಾಗಿದೆ, ಶಾಲಾ ಮಕ್ಕಳು ಸಂಚರಿಸಲು ಸುಸಜ್ಜಿತವಾಗಿ ಸೇತುವ ನಿರ್ಮಾಣವಾಗಿದೆ. ಪಾಶ್ಚಾಪೂರದಲ್ಲಿ ವಿದ್ಯಾರ್ಥಿಗಳಿಗಾಗಿ 7 ನೂತನ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ.
ಪಾಶ್ಚಾಪೂರ- ಬೆಳಗಾವಿ ಮಾರ್ಗದ ರಸ್ತೆ ಅಭಿವೃದ್ದಿ 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಿಂದ ವಂಟಮೂರಿ ಹಾಗೂ ಪಕ್ಕದ ಊರಿಗೆ ತೆರಳು ಅನುಕೂಲವಾಗಿದೆ ಎಂದರು.
ಹೆಬ್ಬಾಳ ಜಿಪಂ ಮಾಜಿ ಸದಸ್ಯ ಮಹಾಂತೇಶ ಮಗದುಮ್ಮ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟ ಶಾಸಕ ಸತೀಶ ಜಾರಕಿಹೊಳಿ ಅವರು, ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಶಾಲಾ ಕಟ್ಟಡಗಳ ನಿರ್ಮಾಣದ ಜತೆ ಮಕ್ಕಳಿಗೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸಿದ್ದಾರೆ. ಈಗಾಗಲೇ ಅಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿವೆ, ಈ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಮನೆ-ಮನೆಗೆ ನೀರಿನ ನಳಗಳನ್ನು ಅಳವಡಿಸಲು ಮಹತ್ವದ ಕಾರ್ಯ ಪ್ರಗತಿಯಲ್ಲಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಹೆಬ್ಬಾಳ- ಕುರಣಿ-ಕೊಚ್ಚರಿಗೆ ಬ್ಯಾರೇಜ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.
ಬಸನಗೌಡ ಪಾಟೀಲ ಮಾತನಾಡಿ, ಯಮಕನಮರಡಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದರೂ ಶಾಸಕರು ಪ್ರಚಾರಕ್ಕರಲ್ಲ, ನಾವೇ ಮಾದ್ಯಮಕ್ಕೆ ತಿಳಿಸಬೇಕಾಗಿದೆ. ಬೆಳಗಾವಿ ಜಿಲ್ಲೆ ಸೇರಿದಂತೆ ಬೇರೆ ಕಡೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಜತೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುತ್ತಾರೆ. ಇಂತಹ ಮಹತ್ತರ ಯೋಜನೆಗಳಿಂದ ಕ್ಷೇತ್ರ ರಾಜ್ಯದಲ್ಲಿ ಹೆಸರು ಮಾಡಿದೆ.
ಯಮಕನಮರಡಿ ಕ್ಷೇತ್ರಕ್ಕೆ ವಿದ್ಯುತ್ ಭಾಗ್ಯ
ಯಮಕನಮರಡಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ವಿದ್ಯುತ ಕೊರತೆಯನ್ನು ಹೊಗಲಾಡಿದ ಹೆಗ್ಗಳಿಕೆ ಶಾಸಕ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ. ಇಂದಿಗೆ ನಾವೇಲ್ಲರೂ ಬೆಳಕಿನಲ್ಲಿದೆ. ಕತ್ತಲೆಯನ್ನು ಹೊಗಲಾಡಿಸಿದ ಧೀಮಂತ ನಾಯಕ ಎಂದರು. ಮಕ್ಕಳು ಸಂಸ್ಕೃತಿಯಾಗಿ ಬೆಳೆಸುವ ಉದ್ದೇಶದಿಂದ ಕ್ಷೇತ್ರದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ, ಅವರನ್ನು ಶಾಸಕರಾಗಿ ಪಡೆದ ನಾವೇ ಭಾಗ್ಯಶಾಲಿಗಳು ಎಂದರು.