ಗೋಕಾಕ : ಸಾಮಾಜಿಕ, ರಾಜಕೀಯ, ಧಾರ್ಮಿಕ ಶೋಷಣೆಗೊಳದವರ ಪರ ಅಂಬೇಡ್ಕರ್ ಹೋರಾಟ ನಡೆಸಿದರು. ಆದ್ದರಿಂದ ಯುವ ಸಮೂಹ ಅವರ ಆದರ್ಶಗಳನ್ನು ಪಾಲನೆ ಮಾಡುವ ಜತೆಗೆ ಅನ್ಯಾಯದ ವಿರುದ್ಧ ಹೋರಾಟ ನಡೆಸುವಲ್ಲಿ ಮುಂದಾಗಬೇಕೆಂದು ಯುವ ನಾಯಕಿ ಪ್ರಿಯಂಕಾ ಸತೀಶ್ ಜಾರಕಿಹೊಳಿ ಕರೆ ನೀಡಿದರು.
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ರಚಿಸಿದ ಡಾ. ಅಂಬೇಡ್ಕರ್ ಅವರನ್ನು ಕೇವಲ ಪೂಜಿಸಿದರೆ ಸಾಲದು ಅವರ ಆದರ್ಶ ಗುಣಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಡಾ. ಬಿ. ಆರ್. ಅಂಬೇಡ್ಕರ್‌ರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲರಿಗೂ ಬೇಕಾದ ಮಹಾನ್ ನಾಯಕರವರು. ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ. ಅವರ ತತ್ವಾದರ್ಶಗಳನ್ನು, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿವೇಕ್ ಜತ್ತಿ, ಪಾಂಡುರಂಗ ರಂಗಸೂಭೆ, ಲಕ್ಷ್ಮಿ ಮಾದಣ್ಣವರ, ರೇಖಾ ಕಂಬಾರ, ಕುಮಾರ ಬೆಳವಿ, ಮಂಜುಳಾ ರಾಮಗಾನಟ್ಟಿ, ಈಶ್ವರ್ ಗುಡಾಜ, , ಪ್ರವೀಣ ಗುಡ್ದಾಕಾಯು, ಸುನೀಲ ಗುಡ್ದಾಕಾಯು, ರಾಮ ಗುಡ್ದಾಕಾಯು, ರಾಹುಲ ಬಡೇಸ್, ರಹಿಮಾನ್ ಮುಕಾಶಿ ಸೇರಿದಂತೆ ಅಂಬೇಡ್ಕರ್ ಅಭಿಮಾನಿಗಳು ಪಾಲ್ಗೊಂಡಿದ್ದರು.